ಹೂಡೆ ಬೀಚ್ ನಲ್ಲಿ ಸಮುದ್ರ ಪಾಲಾದ ಮಣಿಪಾಲದ ಎಂಐಟಿಯ ವಿದ್ಯಾರ್ಥಿಗಳು

ಮಲ್ಪೆ : ಹೂಡೆಯ ಸಮುದ್ರ ತೀರದಲ್ಲಿ ನೀರಿನ ಸೆಳೆತಕ್ಕೆ ಮಣಿಪಾಲದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲಾದ ಘಟನೆ ನಡೆದಿದೆ.

ಸುಮಾರು 15 ಮಣಿಪಾಲದ ಎಂಐಟಿಯ ವಿದ್ಯಾರ್ಥಿಗಳಿದ್ದ ತಂಡವು ಹೂಡೆಯ ಸಮುದ್ರ ತೀರಕ್ಕೆ ಈಜಾಡಲೆಂದು ಸಮುದ್ರಕ್ಕೆ ಇಳಿದಿದ್ದ ಸಂದರ್ಭದಲ್ಲಿ ಅಲೆಯ ರಭಸಕ್ಕೆ ಸಿಕ್ಕಿ ಮೂವರು ಕೊಚ್ಚಿ ಹೋಗಿದ್ದರು.

ಈ ಮಾಹಿತಿ ತಿಳಿದು ಸಾರ್ವಜನಿಕರು ಇಬ್ಬರನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ನಿಶಾಂತ್ ಹಾಗೂ ಷಣ್ಮುಗ ಅವರನ್ನು ರಕ್ಷಣೆ ಮಾಡಲಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಸಮುದ್ರ ಪಾಲಾದ ವಿದ್ಯಾರ್ಥಿ ಹೈದರಾಬಾದ್ನ ಶ್ರೀಕರ ಇನ್ನೂ ಪತ್ತೆಯಾಗಿಲ್ಲ. ಹುಡುಕಾಟ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Scroll to Top