ಮುಂಬಯಿ,ಸೆ, 19: ಎಲ್ಲೆಡೆ ಗಣೇಶ ಹಬ್ಬದ ಸಡಗರ ಮನೆ ಮಾಡಿದೆ. ಮನೆಗಳಲ್ಲಿ , ದೇವಸ್ಥಾನದಲ್ಲಿ , ಸುತ್ತಮುತ್ತಲಿನ ಪ್ರದೇಶದಲ್ಲಿನ ಗಣೇಶ ವಿಗ್ರಹವನ್ನು ಇಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಗಣಪನಿಗೆ ಇಷ್ಟವಾದ ಖಾದ್ಯಗಳನ್ನು ಸಿದ್ದಗೊಳಿಸಿ ಸಂಭ್ರಮದಿಂದ ಸವಿಯುತ್ತಾರೆ. ಅದೇ ರೀತಿ ಇಂಡಿಗೋ ಏರ್ ಲೈನ್ ಕೂಡ ಗಣಪತಿ ಹಬ್ಬಕ್ಕೆ ವಿಶೇಷ ಪೋಸ್ಟ್ ವೊಂದನ್ನು ಹಾಕುವ ಮೂಲಕ ಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ.
ಈ ಪೋಸ್ಟರ್ ಈಗ ಸೋಶಿಯಲ್ ಮಿಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಿಕೊಂಡು ಇಂಡಿಗೋ ಏರ್ ಲೈನ್ಸ್ ಗಣಪತಿಯನ್ನು ಸೃಷ್ಟಿಸಿದ್ದಾರೆ.
ಗಣಪ ವಿಮಾನದ ಸೀಟ್ ನಲ್ಲಿ ಕೂತು ಮೋದಕವನ್ನು ಸೇವಿಸುತ್ತಿರುವ ಎಐ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ”ಬಪ್ಪಾ ಮನೆಗೆ ಬರುತ್ತಿದ್ದಾರೆ” ಎಂದು ಬರೆದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.