ಮಂಡ್ಯದಲ್ಲಿ ತಯಾರಿಸಿದ ಬೆಲ್ಲದ ಗಣಪ ಉಡುಪಿಯಲ್ಲಿ ಪ್ರದರ್ಶನ

ಉಡುಪಿ : ನಾಗರಿಕ ಸಮಿತಿಯ ವತಿಯಿಂದ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಗಣೇಶ ಚತುರ್ಥಿಯನ್ನು ವಿನೂತನ ರೀತಿಯಲ್ಲಿ ಪರಿಸರ ಸ್ನೇಹಿಯಾಗಿ ಇಲ್ಲಿನ ಮಾರುಥಿ ವೀಥಿಕಾದಲ್ಲಿ ಸೆ.19ರಂದು ಆಚರಣೆ ಮಾಡಲಾಯಿತು.



ಶುದ್ಧ ಬೆಲ್ಲದಿಂದ ತಯಾರಿಸುವ ಗಣಪತಿಯನ್ನು ಪ್ರದರ್ಶನ ಮಂಟಪದಲ್ಲಿ ಸ್ಥಾಪಿಸಿ ಪ್ರದರ್ಶಿಸಲಾಯಿತು.

ಮಂಡ್ಯದ ಆಲೆಮನೆಯಲ್ಲಿ ನುರಿತ ಕಲಾವಿದರಿಂದ ಎರಡಡಿ ಚೌಕಾಕೃತಿಯ ಬೆಲ್ಲದ ಗಟ್ಟಿಯಲ್ಲಿ ಗಣಪತಿಯನ್ನು ನಾಜೂಕಿನಿಂದ ಕೆತ್ತಿಸಿ, ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಉಡುಪಿಗೆ ತರಿಸಿದ್ದರು.



ವಿನೂತನ ರೀತಿಯ ಗಣಪತಿ ವಿಕ್ಷಿಸಿ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಕ್ತರ ಒತ್ತಾಯದ ಮೆರೆಗೆ ಬೆಲ್ಲದ ಗಣಪತಿಯನ್ನು ಗುರುವಾರದ ತನಕ ವಿಕ್ಷಣೆಗೆ ಇಡಲು ಒಳಕಾಡು ಅವರು ತಿರ್ಮಾನ ಮಾಡಿದ್ದಾರೆ.



ಕಾರ್ಯಕ್ರಮವನ್ನು ಪರಿಸರ ತಜ್ಞ, ಡಾ. ಸತೀಶ್ ನಾಯ್ಕ್ ಉದ್ಘಾಟಿಸಿದರು.



ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಉದ್ಯಮಿ ಬಾಸ್ಕರ್ ಶೇರಿಗಾರ್, ಜೋಸ್ ಆಲುಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ರಾಜೇಶ್ ಎನ್.ಆರ್, ಹಾಗೂ ಗೋಪಾಲ್, ಬೀಮಾ ಆಭರಣ ಮಳಿಗೆಯ ಅಷ್ಮತ್ ರಾವ್, ಶ್ರೀನಿಧಿ ಭಟ್, ಕೊಟೆಕ್ ಮಹೇಂದ್ರ ಬ್ಯಾಂಕಿನ ಸಿಬಂದಿ, ನಾಗರಿಕ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

You cannot copy content from Baravanige News

Scroll to Top