ಮಡಿಕೇರಿಯಲ್ಲಿ ರಸ್ತೆ ಅಪಘಾತ : ಉಡುಪಿ ಮೂಲದ ಮೆಡಿಕಲ್‌ ವಿದ್ಯಾರ್ಥಿ ಮೃತ್ಯು

ಮಡಿಕೇರಿ : ಕಾಟಕೇರಿ ಬಳಿ ಹಾಲಿನ ಟ್ಯಾಂಕರ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿರುವ ಘಟನೆ ನಡೆದಿದೆ.

ಮಡಿಕೇರಿ ಮೆಡಿಕಲ್‌ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ, ಉಡುಪಿ ಮೂಲದ ವಿಜೇಶ್‌ ಮೃತ ಯುವಕ.

ಬುಧವಾರ ಸಂಜೆ ಉಡುಪಿಯಿಂದ ವಿಜೇಶ್‌ ಮತ್ತು ಶಿವಾನಂದ್‌ ಎಂಬವರು ಬೈಕ್‌ನಲ್ಲಿ ಮಡಿಕೇರಿ ಕಡೆಗೆ ಆಗಮಿಸುತ್ತಿದ್ದು, ಈ ವೇಳೆ ಕಾಟಕೇರಿ ಬಳಿ ಮಡಿಕೇರಿಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಬಹು ಚಕ್ರದ ಹಾಲಿನ ಟ್ಯಾಂಕರ್‌ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್‌ ಸವಾರ ವಿಜೇಶ್‌ ಮೃತಪಟ್ಟಿದ್ದು, ಹಿಂಬದಿ ಸವಾರ ಶಿವಾನಂದ್‌ ಅವರಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಲಾರಿ ಸಹಿತ ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top