ಉಡುಪಿ : ಏಕಕಾಲದಲ್ಲಿ ಹಿಂಜಾವೇ ರಾಜ್ಯ ಖಾತೆ, 20ಕ್ಕೂ ಹೆಚ್ಚು ಮುಖಂಡರ ಫೇಸ್ಬುಕ್ ಅಕೌಂಟ್ ಡಿಲೀಟ್..!!!

ಉಡುಪಿ : ರಾಜ್ಯದಲ್ಲಿ ಏಕಕಾಲಕ್ಕೆ ಹಿಂದು ಜಾಗರಣ ವೇದಿಕೆಯ ರಾಜ್ಯ ಫೇಸ್ಬುಕ್ ಪೇಜ್ ಹಾಗೂ ಎಲ್ಲಾ ಹಿಂಜಾವೇ ಜಿಲ್ಲಾ ನಾಯಕರ fb ಅಕೌಂಟ್ ಹಾಗೂ ಜಾಗರಣಾ ವೇದಿಕೆ ಮುಖಂಡರ ವೆಬ್ ಪೇಜ್, ಡಿಜಿಟಲ್ ಚಾನೆಲ್ ಹ್ಯಾಕ್ ಮಾಡಲಾಗಿದ್ದು, ಹಲವು ಮುಖಂಡರ ಪ್ರೊಫೈಲ್‌ಗಳು ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದಾರೆ.


ಹಿಂದೂ ಜಾಗರಣ ವೇದಿಕೆ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಸಂಘಟನೆಯಾಗಿದ್ದು ಹಿಂಜಾವೆಯ ರಾಜ್ಯದ 20ಕ್ಕೂ ಅಧಿಕ ಪ್ರಮುಖರ ಫೇಸ್ ಬುಕ್ ಪ್ರೊಫೈಲ್ ಗಳನ್ನು ಏಕಕಾಲದಲ್ಲಿ ತೆಗೆದು ಹಾಕಲಾಗಿದೆ. ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ “ಸರ್ಕಾರದ ಸೂಚನೆ ಹೋಗಿ ಮಾಡಿದ್ದರೂ? ಹ್ಯಾಕರ್ಸ್ ಗಳನ್ನು ಬಳಸಿ ಮಾಡಿದ್ದರೋ ಎಂಬುವುದರ ತನಿಖೆಯಾಗಬೇಕು. ಹಿಂದೂ ವಿಚಾರಗಳನ್ನು, ಹೋರಾಟ ಮಾಡುತ್ತಿದ್ದವರನ್ನು ಹತ್ತಿಕ್ಕುವ ಕೆಲಸವಾಗಿದೆ. ಈ ರೀತಿಯಾಗಿ ನಡೆದಿರುವ ಸೈಬರ್ ದಾಳಿ ಗಮನಿಸಿದರೆ ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕುತಂತ್ರವೆಂದು ಮೇಲ್ನೋಟಕ್ಕೆ ಕಂಡುಬರುತ್ತದೆ.2014 ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಪರ ದೊಡ್ಡ ಮಟ್ಟದ ಅಭಿಯಾನ ನಡೆದಿತ್ತು.ಅ ರೀತಿಯ ಅಭಿಯಾನ ಈ ಬಾರಿ ಅಗಬಾರದು ಎನ್ನುವ ನಿಟ್ಟಿನಲ್ಲಿ ಹಿಂದೂ ಮುಖಂಡರ ಪೇಜ್ ಗಳನ್ನು ತೆಗೆದು ಹಾಕಿದ್ದಾರೆ.ಹಿಂಜಾವೆ ಕೇವಲ ಸಾಮಾಜಿಕ ಜಾಲತಾಣವನ್ನು ನಂಬಿಕೊಂಡಿರುವ ಫೇಸ್ ಬುಕ್ ಹುಲಿಗಳಲ್ಲ.ಹಿಂಜಾವೇ ಜನರ ಮಧ್ಯೆ ಕೆಲಸ ಮಾಡಿದೆ, ಮುಂದೆಯು ಮಾಡಲಿದೆ “ಎಂದು ಹೇಳಿದ್ದಾರೆ

Scroll to Top