‘ಆಂಟಿ ಸೈಡಿಗೆ ಬಂದು ಜಾಗ ಬಿಡಿ ಅಂದಿದ್ದೇ ತಪ್ಪಾಯ್ತು’ : ಆಂಟಿ ಎನ್ನುತ್ತಿದ್ದಂತೆ ಕಪಾಳಕ್ಕೆ ಬಾರಿಸಿದ್ದ ಮಹಿಳೆ ; ಪ್ರಕರಣ ದಾಖಲು

ಬೆಂಗಳೂರು : ಆಂಟಿ ಎಂದು ಕರೆದಿದ್ದಕ್ಕೆ ಸೆಕ್ಯೂರಿ ಗಾರ್ಡ್ಗೆ ಮಹಿಳೆ ಒಬ್ಬರು ಕಪಾಳಮೋಕ್ಷ ಮಾಡಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿತ್ತು.

ಇದೀಗ ಕಪಾಳಮೋಕ್ಷ ಮಾಡಿದ ಮಹಿಳೆ ವಿರುದ್ಧ ದೂರು ದಾಖಲಾಗಿದೆ.

ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕೃಷ್ಣಯ್ಯಗೆ ಕಪಾಳಕ್ಕೆ ಹೊಡೆದ ಮಹಿಳೆ ಅಶ್ವಿನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕಳೆದ ಸೆಪ್ಟೆಂಬರ್ 19 ರಂದು ಎಟಿಎಂಗೆ ಹಣ ತುಂಬಲು ಸೆಕ್ಯೂರಿಟಿ ಗಾರ್ಡ್ ಬಂದಿದ್ದರು. ಈ ವೇಳೆ ಅಡ್ಡ ನಿಂತಿದ್ದ ಮಹಿಳೆಗೆ ಆಂಟಿ ಸೈಡಿಗೆ ಬನ್ನಿ ಎಂದಿದ್ದರು. ಇದರಿಂದ ಕೋಪಿಸಿಕೊಂಡ ಮಹಿಳೆ ಕಪಾಳಕ್ಕೆ ಬಾರಿಸಿದ್ದಳು.

ಈ ಸಂಬಂಧ ಸೆಕ್ಯೂರಿಟಿ ಕೃಷ್ಣಯ್ಯ ಮಹಿಳೆ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 506, 504, 324, 355 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Scroll to Top