ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಸಿಕ್ಕ ಬೆಕ್ಕಿನ ಮರಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಸಾಕುತ್ತಾರೆ. ಕಪ್ಪು ಬಣ್ಣದ ಚಿಕ್ಕ ಮರಿ ಎಂದು ತಿಳಿದುಕೊಂಡು ಮನೆಯಲ್ಲಿಯೇ ಅದರ ಪಾಲನೆ, ಪೋಷಣೆ ಮಾಡುತ್ತಾರೆ. ಆದರೆ ದಿನ ಕಳೆಯುತ್ತಾ ಹೋದಂತೆ ಅದು ಬೆಕ್ಕಿನ ಮರಿಯಲ್ಲ ಎಂಬುದು ಆಕೆಗೆ ತಿಳಿಯುತ್ತದೆ. ಅಂದಹಾಗೆಯೇ ಮಹಿಳೆ ಸಾಕಿದ ಮರಿ ಯಾವುದು ಗೊತ್ತಾ..!??
ಮಹಿಳೆ ಕಪ್ಪು ಬಣ್ಣದ ಬೆಕ್ಕಿನ ಮರಿಯೆಂದು ಸಾಕಿದವಳಿಗೆ ಅದರ ಬೆಳವಣಿಗೆ ಕಂಡತೆ ಅದು ಕರಿ ಚಿರತೆ (ಪ್ಯಾಂಥರ್) ಎಂಬುದು ಧೃಡವಾಗಿದೆ.
ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅಂದಹಾಗೆಯೇ ಇದು ರಷ್ಯಾದಲ್ಲಿ ಬೆಳಕಿಗೆ ಬಂದ ಘಟನೆ. ಇನ್ಸ್ಟಾಗ್ರಾಂನಲ್ಲಿ ಪ್ಯಾಂಥರ್ ವಿಡಿಯೋ ವೈರಲ್ ಆಗಿದೆ.
ಕಣ್ಣು ಬಿಡದ ಪ್ಯಾಂಥರ್ ಮರಿ ಆಕಸ್ಮಿಕವಾಗಿ ಸಿಕ್ಕಿದಲ್ಲಿಂದ ಅದರ ಬೆಳವಣಿಗೆ, ಮನೆಯ ಶ್ವಾನದೊಂದಿಗೆ ಆಟ, ಹೀಗೆ ಪ್ಯಾಂಥರ್ ವಿಡಿಯೋವನ್ನು ಫಾಕ್ಟ್ ಮೇಯರ್ ಎಂಬ ಇನ್ಸ್ಟಾ ಖಾತೆ ಹಂಚಿಕೊಂಡಿದೆ. 72 ಲಕ್ಷಕ್ಕೂ ಅಧಿಕ ಜನರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.