ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕಿಗೆ ಸಾಲು ಸಾಲು ರಜೆ; ಒಟ್ಟು 16 ದಿನ ಕ್ಲೋಸ್

ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆ ತಿಂಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಅಕ್ಟೋಬರ್ ತಿಂಗಳ ಬ್ಯಾಂಕ್ ರಜಾಪಟ್ಟಿ ಬಿಡುಗಡೆ ಮಾಡಿದೆ. ಅಕ್ಟೋಬರ್ ತಿಂಗಳು ಕೂಡ ಹಬ್ಬಗಳ ತಿಂಗಳು. ದಸರಾ ಹಬ್ಬ ಈ ತಿಂಗಳಲ್ಲೇ ಇರುವ ಕಾರಣ ದೇಶಾದ್ಯಂತ ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳಿವೆ. ವಾರಂತ್ಯದ ರಜೆಗಳು ಸೇರಿದಂತೆ ಅಕ್ಟೋಬರ್ ತಿಂಗಳಲ್ಲಿ ಒಟ್ಟು 16 ದಿನಗಳ ಕಾಲ ಬ್ಯಾಂಕ್ ಗಳು ಕಾರ್ಯನಿರ್ವಹಿಸೋದಿಲ್ಲ. ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಬ್ಯಾಂಕಿಗೆ ಭೇಟಿ ನೀಡಿ ಮಾಡುವ ಕೆಲಸವಿದ್ರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ. ಬ್ಯಾಂಕ್ ರಜೆಗಳನ್ನು ಆರ್ ಬಿಐ

ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್​ ಕ್ಲೋಸಿಂಗ್ ರಜೆಗಳು. ಆರ್ ಬಿಐ ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಕೋಆಪರೇಟಿವ್ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ಅನ್ವಯಿಸಲಿವೆ. ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕಿಗೆ ಭೇಟಿ ನೀಡಲೇಬೇಕಾದ ಅನಿವಾರ್ಯತೆಯಿದ್ದರೆ ರಜಾಪಟ್ಟಿ ನೋಡಿಕೊಂಡು ಹೋಗೋದು ಉತ್ತಮ. ಗೃಹಸಾಲಕ್ಕೆ ಸಂಬಂಧಿಸಿದ ಕೆಲಸಗಳಿದ್ದರೆ ಅಥವಾ ವಾಹನ ಇಲ್ಲವೇ ಇನ್ಯಾವುದೇ ಸಾಲದ ಕೆಲಸಗಳಿಗೆ ಬ್ಯಾಂಕಿಗೆ ಭೇಟಿ ನೀಡಬೇಕಿದ್ದರೆ ರಜೆಗಳನ್ನು ನೋಡಿಕೊಂಡು ಹೋಗಿ. ಇಲ್ಲವಾದರೆ ಸುಮ್ಮನೆ ಬ್ಯಾಂಕಿಗೆ ಹೋಗಿ ಬಂದಂತಾಗುತ್ತದೆ. ನಿಮ್ಮ ಸಮಯ ಹಾಗೂ ಶ್ರಮ ಎರಡೂ ವ್ಯರ್ಥವಾಗುತ್ತದೆ. ರಜೆಯಿರುವ ದಿನ ಎಟಿಎಂ ಸೇವೆಗಳು ಹಾಗೂ ಆನ್ ಲೈನ್ ಬ್ಯಾಂಕಿಗೆ ವ್ಯವಹಾರಗಳಿಗೆ ಯಾವುದೇ ಅಡ್ಡಿಯಿಲ್ಲ.

ಅಕ್ಟೋಬರ್ ತಿಂಗಳ ರಜಾಪಟ್ಟಿ ಹೀಗಿದೆ:
ಅಕ್ಟೋಬರ್ 1: ಭಾನುವಾರ
ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ
ಅಕ್ಟೋಬರ್ 8: ಭಾನುವಾರ
ಅಕ್ಟೋಬರ್ 14: ಎರಡನೇ ಶನಿವಾರ, ಮಹಾಲಯ ಅಮಾವಸ್ಯೆ (ಕರ್ನಾಟಕ, ಒಡಿಶಾ, ತ್ರಿಪುರ ಹಾಗೂ ಪಶ್ಚಿಮ ಬಂಗಾಳ)
ಅಕ್ಟೋಬರ್ 15: ಭಾನುವಾರ
ಅಕ್ಟೋಬರ್ 18: ಕಟಿ ಬಿಹು (ಅಸ್ಸಾಂ)
ಅಕ್ಟೋಬರ್ 19: ಸಂವತ್ಸರಿ ಹಬ್ಬ (ಗುಜರಾತ್)
ಅಕ್ಟೋಬರ್ 21: ದುರ್ಗಾ ಪೂಜೆ (ಮಹಾ ಸಪ್ತಮಿ)
ಅಕ್ಟೋಬರ್ 22: ಮಹಾ ಅಷ್ಟಮಿ

ಅಕ್ಟೋಬರ್ 23: ಮಹಾನವಮಿ /ಆಯುಧಾ ಪೂಜೆ
ಅಕ್ಟೋಬರ್ 24: ದಸರಾ /ವಿಜಯದಶಮಿ/ ದುರ್ಗಾ ಪೂಜೆ
ಅಕ್ಟೋಬರ್ 25: ದುರ್ಗಾ ಪೂಜೆ (ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್ ರಜೆ)
ಅಕ್ಟೋಬರ್ 26: ದುರ್ಗಾ ಪೂಜೆ (ಗ್ಯಾಂಗ್ಟಾಕ್, ಜಮ್ಮು, ಶ್ರೀನಗರದಲ್ಲಿ ಬ್ಯಾಂಕ್ ರಜೆ)
ಅಕ್ಟೋಬರ್ 27: ದುರ್ಗಾ ಪೂಜೆ
ಅಕ್ಟೋಬರ್ 28: ನಾಲ್ಕನೇ ಶನಿವಾರ, ಲಕ್ಷ್ಮೀ ಪೂಜೆ (ಕೋಲ್ಕತ್ತಾದಲ್ಲಿ ಬ್ಯಾಂಕ್ ರಜೆ)
ಅಕ್ಟೋಬರ್ 31: ಸರ್ದಾರ್ ವಲ್ಲಭ ಭಾಯಿ ಪಟೇಲ್ ಜನ್ಮದಿನ (ಅಹಮದಾಬಾದ್ ನಲ್ಲಿ ಬ್ಯಾಂಕ್ ರಜೆ)

Scroll to Top