ಉಡುಪಿ : ಜಿಲ್ಲೆಯಲ್ಲಿ ಅಕ್ರಮ ಖನಿಜ ಸಾಗಾಟದ ವಿರುದ್ದ ಕಾರ್ಯಾಚರಣೆ ಮುಂದುವರೆದಿದ್ದು, ಲಾರಿ ಮುಷ್ಕರದ ನಡುವೆಯೂ ರಾತ್ರಿ ಅಕ್ರಮವಾಗಿ ಜಲ್ಲಿಕಲ್ಲು, ಮರಳು ಸಾಗಾಟ ಮಾಡುತ್ತಿದ್ದ ನಾಲ್ಕು ಲಾರಿಯನ್ನು ಉದ್ಯಾವರ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
16 ಚಕ್ರದ ಮೂರು ಲಾರಿ, ಒಂದು ಟಿಪ್ಪರ್ ವಶಕ್ಕೆ ಪಡೆಯಲಾಗಿದ್ದು, ಟ್ರಿಪ್ ಶೀಟ್, ಟನ್ ಜಿಪಿಎಸ್ ರಹಿತವಾಗಿ ಜಲ್ಲಿಕಲ್ಲು, ಎಂ ಸ್ಯಾಂಡ್, ಟ್ರಿಪ್ ಶೀಟ್ ಸಾಗಾಟ ಮಾಡಲಾಗುತ್ತಿತ್ತು.
ಉಡುಪಿ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳನ್ನು ಲಾರಿಗಳಲ್ಲಿ ಸಾಗಾಟ ಮಾಡುತ್ತಿದ್ದು, ಅಡ್ಡಾದಿಡ್ಡಿ ಟಿಪ್ಪರ್ ಚಲಾಯಿಸಿ ಸ್ಕೂಟರ್ ಗೆ ಢಿಕ್ಕಿ ಹೊಡೆದಿದ್ದು ಸ್ಕೂಟರ್ ಸವಾರ ಅಪಾಯದಿಂದ ಪಾರಾಗಿದ್ದಾರೆ.
ಇನ್ನು ಉಡುಪಿ ನಗರ ಠಾಣಾ ಎಸ್ ಐ ಮಂಜಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಮೂರು ಬೃಹತ್ ಲಾರಿ, ಒಂದು ಟಿಪ್ಪರ್ ವಶಕ್ಕೆ ಪಡೆದುಕೊಳ್ಳಲಾಗಿದೆ.