ಚೆನ್ನೈ : ಚಾರ್ಜ್ಗೆಂದು ಇಟ್ಟಿದ್ದ ಮೊಬೈಲ್ ಏಕಾಏಕಿ ಸ್ಫೋಟಗೊಂಡು ಮಹಿಳೆ ದಾರುಣವಾಗಿ ಸಾವನ್ನಪ್ಪಿರೋ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಕೊಕಿಲಾಂಪಾಲ್ (33) ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಮೃತ ಮಹಿಳೆಯು ತಂಜಾವೂರು ಜಿಲ್ಲೆಯ ಪಾಪನಾಶಂ ಬಳಿ ಇರುವ ವಿಶಿಷ್ಟರಾಜಪುರಂ ಮೂಲದ ನಿವಾಸಿ. ಈಕೆಗೆ ಓರ್ವ ಮಗನಿದ್ದಾನೆ. ಈಕೆಯ ಪತಿ ಪ್ರಭಾಕರನ್ ಕೆಲ ವರ್ಷಗಳ ಹಿಂದೆ ಅನಾರೋಗ್ಯ ಕಾರಣದಿಂದ ಮೃತಪಟ್ಟಿದ್ದರು.
ಇನ್ನೂ ಈಕೆ ತನ್ನ ಫೋನ್ನನ್ನು ಚಾರ್ಜ್ಗೆ ಇಟ್ಟು ಹೆಡ್ ಸೆಟ್ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸ್ಫೋಟಗೊಂಡಿದೆ. ಇದರ ಪರಿಣಾಮ ಕೋಕಿಲಾಂಪಲ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಲ್ಲದೆ ಅಂಗಡಿಯಲ್ಲಿದ್ದ ಸಾಮಗ್ರಿಗಳು ಕೂಡ ಬೆಂಕಿಗೆ ಆಹುತಿಯಾಗಿವೆ.
ಸದ್ಯ ಈ ಸಂಬಂಧ ಕೋಕಿಲಂಪಾಲ್ ತಂದೆ ಕಪಿಸ್ತಲಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನೂ ಇತ್ತೀಚೆಗೆ ಹಲವಾರು ಮೊಬೈಲ್ ಫೋನ್ಗಳು ಸ್ಫೋಟಗೊಂಡ ಘಟನೆಗಳು ವರದಿಯಾಗುತ್ತಿವೆ. 70 ವರ್ಷದ ವೃದ್ಧನ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡ ಘಟನೆಯೂ ಸುದ್ದಿಯಾಗಿತ್ತು. ತ್ರಿಶೂರ್ ಮರೋಟ್ಟಿಚಾಲ್ ನಿವಾಸಿ ಇಲಿಯಾಸ್ ಎಂಬವರ ಫೋನ್ ಸ್ಫೋಟಗೊಂಡಿತ್ತು. ಅಪಘಾತದಿಂದ ಎಲಿಯಾರ್ ಸ್ವಲ್ಪದರಲ್ಲೇ ಪಾರಾದ ವಿಡಿಯೋ ದೃಶ್ಯಾವಳಿ ಕೂಡ ವೈರಲ್ ಆಗಿತ್ತು.