ಕಾವೇರಿ ಹೋರಾಟಕ್ಕೆ ಬುರ್ಕಾ ಧರಿಸಿ ಬಂದ ವಾಟಾಳ್ ನಾಗರಾಜ್.. ಈ ಬಗ್ಗೆ ಏನಂದ್ರು ಗೊತ್ತಾ?

ಬೆಂಗಳೂರು : ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕಾಗುತ್ತಿರೋ ಅನ್ಯಾಯ ಖಂಡಿಸಿ ನಿನ್ನೆ ಇಡೀ ಕರ್ನಾಟಕ ಬಂದ್ ಮಾಡಲಾಗಿದೆ. ಕಾವೇರಿ ನೀರು ಉಳಿವಿಗಾಗಿ ನಡೆಯುತ್ತಿರೋ ಬಂದ್ನಲ್ಲಿ ಭಾಗಿಯಾಗಲು ವಿಶಿಷ್ಟ ಡ್ರೆಸ್ ಧರಿಸಿ ಬಂದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಗಮನ ಸೆಳೆದರು.

ಈ ಬಗ್ಗೆ ಮಾತಾಡಿದ ವಾಟಾಳ್ ನಾಗರಾಜ್, ನಾನು ಧರಿಸಿರೋ ಬುರ್ಕಾ ಮಹಿಳೆಯರ ಸಂಕೇತ. ಹೆಣ್ಣುಮಕ್ಕಳಿಗೆ ರಾಜಕೀಯದಲ್ಲಿ ಸಿಕ್ಕಿರೋ ಶೇ.33 ರಷ್ಟು ಮೀಸಲಾತಿ ಸಂಕೇತ. ನಾಡಿನ ಪರ ಧನಿ ಎತ್ತೋ ಹೆಣ್ಣುಮಕ್ಕಳ ಸಂಕೇತ ಎಂದರು.

ನಾವು ಟೌನ್ಹಾಲ್ ಮುಂಭಾಗ ಪ್ರತಿಭಟನೆ ಮಾಡುತ್ತೇವೆ. ಅಕ್ಟೋಬರ್ 5ನೇ ತಾರೀಕು ಇಡೀ ರಾಜ್ಯ ಎಂದೂ ಕಂಡರಿಯದಂತಹ ಹೋರಾಟ ಮಾಡ್ತೀವಿ. ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಿಂದ ಮೈಸೂರಿನ ಕೆಆರ್ಎಸ್ವರೆಗೂ ಸಾವಿರಾರು ವಾಹನಗಳಲ್ಲಿ ದೊಡ್ಡ ಮೆರವಣಿಗೆ ಮಾಡುತ್ತಿದ್ದೇವೆ ಎಂದರು.

ಡಿಸಿಎಂ ಡಿ.ಕೆ ಶಿವಕುಮಾರ್ ಯಾರು ಏನು ಬೇಕಾದ್ರೂ ಮಾಡಿ ನೀರು ಬಿಡ್ತೀವಿ ಅಂತಿದ್ದಾರೆ. ನಾವು ಬೀದಿ ಹೋರಾಟ ಮಾಡ್ತೀವಿ, ನಾವೇನು ಅಂತಾ ತೋರಿಸ್ತೀವಿ. ಸರ್ಕಾರ ದಬ್ಬಾಳಿ ಮಾಡ್ತಿದೆ, ಕನ್ನಡಪರ ಹೋರಾಟಗಾರರನ್ನು ಬಂಧಿಸಬಾರದು ಎಂದರು.

You cannot copy content from Baravanige News

Scroll to Top