ವಾಟ್ಸ್ಆ್ಯಪ್ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಒಂದು. ವಿಶ್ವದಾದ್ಯಂತ ಸಾಕಷ್ಟು ಜನರು ಇದನ್ನು ಬಳಕೆ ಮಾಡುತ್ತಾರೆ. ದೈನಂದಿನ ವ್ಯವಹಾರಗಳಿಂದ ಹಿಡಿದು, ಡಾಕ್ಯುಮೆಂಟ್, ವಿಡಿಯೋ, ಆಡಿಯೋ ಕಳುಹಿಸುವುದರೆ ಜೊತೆಗೆ ನಾನಾ ಕೆಲಸಗಳನ್ನು ಮಾಡಲು ಯೋಗ್ಯವಾದ ಅಪ್ಲಿಕೇಶನ್ ಇದಾಗಿದೆ. ಹಾಗಾಗಿ ಈ ಆ್ಯಪ್ ಬಹುತೇಕರ ಮನ ಗೆದ್ದಿದೆ. ಆದರೆ ಶಾಕಿಂಗ್ ವಿಚಾರ ಎಂದರೆ ವಾಟ್ಸ್ಆ್ಯಪ್ ಕೆಲವೊಂದು ಫೋನ್ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದೆ ಮುಂದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ವಾಟ್ಸ್ಆ್ಯಪ್ ಅಕ್ಟೋಬರ್ 24ರ ಬಳಿಕ ಆ್ಯಂಡ್ರಾಯ್ಡ್ ಒಎಸ್ ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯ ಫೋನ್ಗಳಿಗೆ ಬೆಂಬಲವನ್ನು ಕೊಡುವುದಿಲ್ಲ ಎಂದು ತಿಳಿಸಿದೆ. ಈ ಬಗ್ಗೆ ವಾಟ್ಸ್ಆ್ಯಪ್ ಫಾಕ್ನಲ್ಲಿ ಮಾಹಿತಿ ಹಂಚಿಕೊಂಡಿದೆ.
ಅಂದಹಾಗೆಯೇ ವಾಟ್ಸ್ಆ್ಯಪ್ ಯಾವೆಲ್ಲಾ ಫೋನ್ನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ನೋಡುವುದಾದರೆ..
1.ನೆಕ್ಸಸ್ 7 (ಆ್ಯಂಡ್ರಾಯ್ಡ್ 4.2 ಗೆ ಅಪ್‌ಗ್ರೇಡ್ ಮಾಡಬಹುದು)
2. ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 2 (Samsung Galaxy Note 2)
3. ಹೆಚ್ಟಿಸಿ ಒನ್
4. ಸೋನಿ ಎಕ್ಸ್‌ಪೀರಿಯಾ Z
5. ಎಲ್ಜಿ ಆಪ್ಟಿಮಸ್ ಜಿ ಪ್ರೊ
6. ಸ್ಯಾಮ್ಸಂಗ್ ಗ್ಯಾಲಕ್ಸಿ S2
7. ಸ್ಯಾಮ್ಸಂಗ್ ಗ್ಯಾಲಕ್ಸಿ ನೆಕ್ಸಸ್
8. ಹೆಚ್ಟಿಸಿ ಸೆನ್ಸೇಶನ್
9. ಮೊಟೊರೊಲಾ ಡ್ರೋಯ್ಡಿ ರೇಜರ್
10. ಸೋನಿ ಎಕ್ಸ್‌ಪೀರಿಯಾ S2
11. ಮೊಟೊರೊಲಾ ಕ್ಸೂಮ್
12. ಸ್ಯಾಮ್ಸಂಗ್ ಗ್ಯಾಲಕ್ಸಿ ಟಾಬ್ 10.1
13. ಅಸೂಸ್ ಇ ಪ್ಯಾಡ್ ಟ್ರಾನ್ಸ್ಫಾರ್ಮರ್
14. ಏಸರ್ ಐಕೋನಿಯಾ ಟ್ಯಾಬ್ A5003
15. ಸ್ಯಾಮ್ಸಂಗ್ ಗ್ಯಾಲಕ್ಸಿ S
16. ಹೆಚ್ಟಿಸಿ ಡಿಸೈರ್ HD
17. ಎಲ್ಜಿ ಆಪ್ಟಿಮಸ್ 2X
18. ಸೋನಿ ಎರಿಕ್ಸನ್ ಎಕ್ಸ್ಪೀರಿಯಾ Arc3