ಯುವತಿಯರೇ ಎಚ್ಚರ ! ಫೇಸ್ಬುಕ್ನಲ್ಲಿ ಹಿಂದೂ, ರಿಯಾಲಿಟಿಯಲ್ಲಿ ಮುಸ್ಲಿಂ.. ಈತನನ್ನು ನಂಬಿ ಮೋಸ ಹೋಗ್ಬೇಡಿ, ಹುಷಾರ್

ಸಾಮಾಜಿಕ ಜಾಲತಾಣ ಬಳಸುವ ಹುಡುಗಿಯೇ ಎಚ್ಚರ. ಯಾಕಂದ್ರೆ ಫೇಸ್ಬುಕ್ನಲ್ಲಿ ಹಿಂದೂ ಹೆಸರು ಬಳಸಿಕೊಂಡು ನಕಲಿ ಖಾತೆ ತೆರೆದು ಹುಡುಗಿಯರನ್ನೇ ಖೆಡ್ಡಾಗೆ ಕೆಡವುತ್ತಿದ್ದ ಆಸಾಮಿಯ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ.

ರಫೀಕ್ ಬಾದ್ ಶಾ ಎಂಬ ಹೆಸರಿನ ಮುಸ್ಲಿಂ ಯುವಕ ಗುರುಪ್ರಸಾದ್ ಎಂಬ ನಕಲಿ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ಖಾತೆ ತೆಗೆದಿದ್ದ. ಹಿಂದೂ ಹುಡುಗಿಯರನ್ನೆ ಟಾರ್ಗೆಟ್ ಮಾಡ್ತಿದ್ದ. ಚೆಂದವಾಗಿ ಕಾಣುವ ಯುವತಿಯರಿಗೆ ನಕಲಿ ಅಕೌಂಟ್ ನಿಂದ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಹೀಗೆ ನಕಲಿ ಅಕೌಂಟ್ ಎಂದು ಗೊತ್ತಿಲ್ಲದೆ ಓರ್ವ ಯುವತಿ ರಿಕ್ವೆಸ್ಟ್ ಆಕ್ಸೆಫ್ಟ್ ಮಾಡಿದ್ದಳು.

ಯುವತಿಯನ್ನು ಪ್ರೀತಿಗೆ ಬೀಳಿಸಿದ

ರಿಕ್ವೆಸ್ಟ್ ಆಕ್ಸೆಫ್ಟ್ ಆಗಿದ್ದೇ ದಿನೇವೇ ರಫೀಕ್ ಬಾದ್ ಶಾ ತನ್ನ ಹೆಸರು ಗುರುಪ್ರಸಾದ್ ಎಂದು ಹೇಳಿಕೊಂಡ ಚಾಟಿಂಗ್ ಮುಂದುವರೆಸಿದ್ದನು. ನಂತರ ಯುವತಿಯನ್ನು ಪ್ರೀತಿಗೆ ಬೀಳಿಸಿದ್ದನು. ಇಬ್ಬರ ನಡುವೆ ಪ್ರೀತಿ ಶುರುವಾಗಿ ಬಳಿಕ ಇಬ್ಬರು ಜೊತೆಯಲ್ಲಿ ಇರಲು ಶುರು ಮಾಡಿದ್ದರು.

ಲೀವಿಂಗ್ ರಿಲೇಷನ್ಶಿಫ್

ರಫೀಕ್ ಬಾದ್ ಶಾ ಯುವತಿಯ ಜೊತೆಗೆ ಲೀವಿಂಗ್ ರಿಲೇಷನ್ಶಿಫ್ನಲ್ಲಿ ಇದ್ದ. ದಿನ‌ಕಳೆದಂತೆ ಆತ ಹಿಂದು ಅಲ್ಲ ಮುಸ್ಲಿಂ ಅನ್ನೋದು ಬಯಲಾಯ್ತು. ಈತನ ಹೆಸರು ಗುರುಪ್ರಸಾದ್ ಅಲ್ಲ ರಫೀಕ್ ಬಾದ್ ಶಾ ಅನ್ನೋದು ಯುವತಿಗೆ ತಿಳಿಯಿತು.

ಮತಾಂತರವಾಗುವಂತೆ ಒತ್ತಾಯ

ಬಳಿಕ ರಫೀಕ್ ಬಾದ್ ಶಾ ಮುಸ್ಲಿಂಗೆ ಧರ್ಮಕ್ಕೆ ಬದಲಾಗುವಂತೆ ಒತ್ತಾಯಿಸಿದ್ದ. ಇದಕ್ಕೆ ಯುವತಿ ಪ್ರತಿರೋಧ ಒಡ್ಡಿದ್ದಳು. ಆದರು ಆತ ಆಕೆಗೆ ಹಿಂಸೆ ಕೊಡಲು ಶುರು ಮಾಡಿದನು.

ಪೊಲೀಸ್ಠಾಣೆ ಮೆಟ್ಟಿಲೇರಿದ ಟೆಕ್ಕಿ

ಸದ್ಯ ಐಟಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡ್ತಾ ಇರೋ ಯುವತಿ ಆತನಿಂದ ಬೇಸತ್ತು ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ದೂರು ದಾಖಲಾಗಿದ್ದು ಗೊತ್ತಾಗುತ್ತಿದ್ದಂತೆಯೇ ರಫೀಕ್ ಬಾದ್ ಶಾ ನಾಪತ್ತೆಯಾಗಿದ್ದಾನೆ. ಸದ್ಯ ರಫೀಕ್ಗಾಗಿ ಗಿರಿನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

You cannot copy content from Baravanige News

Scroll to Top