ಮೈಸೂರು : ಮೈಸೂರಿನಲ್ಲಿ ನಡೆಯುತ್ತಿರುವ ಪೇಜಾವರ ಶ್ರೀಪಾದರ 36ನೇ ಚಾತುರ್ಮಾಸ್ಯದ ಸಮಾರೋಪ ಸಮಾರಂಭ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿಯವರು ವಹಿಸಿದ್ದರು.
ದಿವ್ಯಸಾನಿದ್ಯ ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮಿಜಿಯವರು. ಮುಖ್ಯ ಅತಿಥಿಗಳಾಗಿ ಗೋವಾ ರಾಜ್ಯಪಾಲ ಪಿಎಸ್ ಶ್ರೀಧರನ್ ಪಿಳ್ಯೈ ವಹಿಸಿದ್ದರು.
ಗೋವಾ ರಾಜ್ಯಪಾಲ ಮಾತನಾಡಿ, ಸನಾತನ ಧರ್ಮದ ಬಗ್ಗೆ ಹಾಗೂ ಹಿರಿಯ ಗುರುಗಳು ಕೇರಳ ಭಾಗದಲ್ಲಿ ಅಸ್ಪೃಶ್ಯತೆ ನಿವಾರಣೆಯನ್ನು ಮಾಡಿದ್ದರು.
ಅದರಂತೆ ಈಗಿನ ಗುರು ವಿಶ್ವಪ್ರಸನ್ನ ತೀರ್ಥರು ಕೂಡಾ ತಮ್ಮ ಗುರುಗಳ ಹಾದಿಯಲ್ಲಿ ಇದ್ದಾರೆ ಎಂದು ತಿಳಿಸಿದರು.
ಸಚ್ಚಿದಾನಂದ ಸ್ವಾಮಿಜಿಯವರು ಮಾನವ ಶರೀರ ಎಷ್ಟು ಮುಖ್ಯ ಎಂದು ತಿಳಿಸಿದರು.
ಶ್ರೀ ಶಿವರಾತ್ರೀಶ್ವರ ಸ್ವಾಮಿಜಿಯವರು ವಿಶ್ವೇಶತೀರ್ಥರಿಗೆ ಲೋಕದಲ್ಲಿ ಸಮಾನ ಯಾರು ಎಂದರೆ ಅದು ವಿಶ್ವೇಶತೀರ್ಥರೆ ಹಾಗೂ ರಾಮಮಂತ್ರ ಜಪವನ್ನು ಎಲ್ಲರೂ ಜಪಿಸಿ ಎಂದು ಹೇಳಿದರು.
ಪೇಜಾವರ ಶ್ರೀ ಆಶೀರ್ವಚನ ನೀಡಿದರು. ಗುರುವಂದನಾ ನುಡಿಗಳನ್ನು ಡಾ. ಆನಂದತೀರ್ಥಾಚಾರ್ ನಾಗಸಂಪಿಗೆ ಮಾಡಿದರು.