ರಣ್‌ಬೀರ್ ಜೊತೆ ನಟಿಸಲು 4 ಕೋಟಿ ಸಂಭಾವನೆ ಪಡೆದ ನಟಿ ರಶ್ಮಿಕಾ..!

ಮುಂಬೈ, ಅ 01: ಕನ್ನಡದ ಬ್ಯೂಟಿ ರಶ್ಮಿಕಾ ಮಂದಣ್ಣ ಸೌತ್- ಬಾಲಿವುಡ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ. ಸಾಲು ಸಾಲು ಸಿನಿಮಾ ಆಫರ್‌ಗಳು ಬರುತ್ತಿದೆ. ಈಗ ‘ಅನಿಮಲ್’ ಸಿನಿಮಾಗಾಗಿ ರಶ್ಮಿಕಾ ಪಡೆದ ಸಂಭಾವನೆ ಬಗ್ಗೆ ಸಖತ್ ಸುದ್ದಿಯಾಗುತ್ತಿದೆ. ರಣ್‌ಬೀರ್ ಜೊತೆ ನಟಿಸಲು ನಟಿ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ.

ರಶ್ಮಿಕಾ ಮಂದಣ್ಣಗೆ ‘ಅನಿಮಲ್’ ಬಾಲಿವುಡ್‌ನ 3ನೇ ಸಿನಿಮಾವಾಗಿದ್ದು, ಮೊದಲ ಬಾರಿಗೆ ರಣ್‌ಬೀರ್ ಕಪೂರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ ಈ ಚಿತ್ರಕ್ಕಾಗಿ 4 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾದಲ್ಲಿ ನಟಿಸಲು ರಣ್‌ಬೀರ್ ಕಪೂರ್ 75 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.ಅನಿಮಲ್ ರಿಲೀಸ್ ಮುನ್ನವೇ ಚಿತ್ರ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರದ ಟೀಸರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಡಿಸೆಂಬರ್ 1ರಂದು ಬಹುಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ಅನಿಮಲ್ ಚಿತ್ರದ ಮೂಲಕ ರಶ್ಮಿಕಾ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳಲಿದ್ದಾರಾ ಎಂದು ನೋಡಬೇಕಿದೆ.

You cannot copy content from Baravanige News

Scroll to Top