ಕಾಪು: ‘ಅಗ್ನಿವೀರ್’ ಗೆ ಮಣಿಕಂಠ ಎಸ್.ಡಿ ಆಯ್ಕೆ

ಕೋಸ್ಟಲ್ ವಿಂಗ್ಸ್ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಕಾಪು, ಉಡುಪಿ ಇಲ್ಲಿ ತರಬೇತಿ ಪಡೆದು “ಅಗ್ನಿವೀರ್” ಗೆ ಆಯ್ಕೆಯಾದ “ಮಣಿಕಂಠ ಎಸ್.ಡಿ” ಅವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.

ಶಾಸಕರು ಮಾತನಾಡಿ ಯಾವುದೇ ಕ್ಷೇತ್ರದಲ್ಲಿ ಗೆಲುವು ಒಮ್ಮೆಗೆ ದೊರಕುವುದಿಲ್ಲ. ಕಠಿಣ ಪರಿಶ್ರಮ ಮತ್ತು ದೃಢವಾದ ನಿರ್ಧಾರದಿಂದ ಗೆಲುವು ಸಾಧಿಸಲು ಸಾಧ್ಯ. ನಮ್ಮ ಪ್ರಾಮಾಣಿಕ ಪ್ರಯತ್ನವಿದ್ದಲ್ಲಿ ದೇವರು ನಮ್ಮ ಕೈ ಹಿಡಿಯುತ್ತಾನೆ ಎಂದು ಹೇಳಿದ ಅವರು ಮಕ್ಕಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರು, ಎಸ್.ಸಿ.ಸಿ ನಾವಲ್ ವಿಂಗ್ ಕಮಾಂಡರ್ ಡಾ. ಪರಶೋತ್ತಮ ಕೆ.ವಿ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕರಾದ ದಿನೇಶ್ ಎಂ, ಕೋಸ್ಟಲ್ ವಿಂಗ್ಸ್ ಅಕಾಡೆಮಿಯ ದೈಹಿಕ ತರಬೇತುದಾರರಾದ ರಾಜೇಶ್ ಜಿ ಮೆಂಡನ್,ಕಾಪು ಪುರಸಭಾ ಸದಸ್ಯರಾದ ಅನಿಲ್ ಕುಮಾರ್, ಕೋಸ್ಟಲ್ ವಿಂಗ್ಸ್ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಾರ್ತಿಕ್ ಉಪಸ್ಥಿತರಿದ್ದರು.

You cannot copy content from Baravanige News

Scroll to Top