ಮಂಗಳೂರು : ಅವಿಭಜಿತ ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಾ ಅಪಾರ ಜನ ಮನ್ನಣೆಗೆ ಪಾತ್ರವಾಗಿದ್ದ ಮಹೇಶ್ ಮೋಟರ್ಸ್ ಬಸ್ ಮಾಲಿಕ ಪ್ರಕಾಶ್ ಶೇಖಾರ ಅಂತ್ಯಕ್ರಿಯೆ ಮಂಗಳೂರಿನ ಶಕ್ತಿ ನಗರ ರುದ್ರಭೂಮಿಯಲ್ಲಿ ನಡೆಯಿತು.
ಭಾನುವಾರ ಸಂಜೆ ತನ್ನ ಕದ್ರಿ ಕಂಬಳದಲ್ಲಿರುವ ಖಾಸಾಗಿ ಅಪಾರ್ಟ್ಮೆಂಟ್‌ನಲ್ಲಿ 42 ವರ್ಷದ ಪ್ರಕಾಶ್ ಶೇಖಾ ನೇಣಿಗೆ ಕೊರಳೊಡ್ಡಿ ಜೀವಾಂತ್ಯ ಮಾಡಿಕೊಂಡಿದ್ದರು.
ಕದ್ರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು,
ಕಾನೂನಿನ ಪ್ರಕ್ರೀಯೆಗಳನ್ನು ಮುಗಿಸಿದ ಬಳಿಕ ಪ್ರಕಾಶ್ ಶವವನ್ನು ಮನೆಯವರಿಗೆ ಹಸ್ತಾಂತರ ಮಾಡಿದ್ದರು. ಸೋಮವಾರ ಬೆಳಿಗ್ಗೆ ನಗರದ ಶಕ್ತಿನಗರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು.
ಇದಕ್ಕೂ ಮುನ್ನ ನಗರದಲ್ಲಿ ನಡೆದ ಪ್ರಕಾಶ್ ಶೇಖಾರ ಅಂತಿಮ ಯಾತ್ರೆಯಲ್ಲಿ ಮಹೇಶ್ ಮೋಟರ್ಸ್‌ನ ಎಲ್ಲಾ 65 ಬಸ್ ಗಳ ಸಿಬಂದಿ ತಮ್ಮ ಬಸ್‌ಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾಲಿಕನಿಗೆ ಅಂತಿಮ ವಿದಾಯ ಹೇಳಿದರು.
ಕಳೆದ ಹಲವಾರು ವರ್ಷಗಳಿಂದ ಪ್ರಕಾಶ್ ಅವರ ಮಾಲಿಕತ್ವದಲ್ಲಿ ‘ಮಹೇಶ್’ ಹೆಸರಿನ ಖಾಸಗಿ ಬಸ್ ಗಳು ಜಿಲ್ಲೆಯಲ್ಲಿ ನಿತ್ಯ ಸಂಚಾರ ನಡೆಸುತ್ತಿದ್ದು. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಿ ಪ್ರೀತಿ,ವಿಶ್ವಾಸ ಗಳಿಸಿದ್ದರು ಮಾತ್ರವಲ್ಲ ನೂರಾರು ಯುವಕರಿಗೆ ಉದ್ಯೋಗ ಕೂಡ ನೀಡಿ ಯದ್ಯೋಗದಾತರು ಆಗಿದ್ದರು.
ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಪರೋಪಕಾರಿ ಗುಣ ಕೂಡ ಪ್ರಕಾಶ್ ಶೇಖಾ ಅವರಿಗಿತ್ತು.
ಆದ್ರೆ ಎಲ್ಲವನ್ನು ಹೊಂದಿದ್ದ ಯುವಕ ಅದ್ಯಾವುದೋ ನಿಗೂಢ ಕಾರಣಕ್ಕೆ ಇಹಲೋಕವನ್ನು ಏಕಾಏಕಿ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ ಜೊತೆಗೆ ತನ್ನನ್ನು ನಂಬಿಕೊಂಡಿದ್ದ ಕುಟುಂಬ, ಸಿಬಂದಿ ಸೇರಿ ಸಾವಿರಾರು ಜನರನ್ನು ದುಃಖದ ಶೋಕದ ಸಾಗರದಲ್ಲಿ ಮುಳುಗಿಸಿದ್ದಾರೆ.