ಉಡುಪಿ : ರಾಜ್ಯದಲ್ಲಿ ಕಾವೇರಿ ನದಿ ನೀರು ತಮಿಳುನಾಡಿಗೆ ಹಂಚಿಕೆ ವಿವಾದ ಭುಗಿಲೆದ್ದಿದ್ದು, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಬದ್ಧವಾಗಿರುವುದು ಅಗತ್ಯ ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಕಾವೇರಿ ನದಿ ನೀರು ತಮಿಳುನಾಡಿಗೆ ಹಂಚಿಕೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಉಡುಪಿಯ ಮಠದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಕೋರ್ಟ್ ಆದೇಶವನ್ನು ಮೀರಿ ಹೋಗಲು ಸಾಧ್ಯವಿಲ್ಲ.
ಹೋರಾಟಗಳು ಜನಾಭಿಪ್ರಾಯವನ್ನು ರೂಪಿಸುತ್ತದೆ ನಿಜ.ಸಮರ್ಪಕವಾದ ವಾದ ಮಂಡಿಸಿ ನಿಜ ಸ್ಥಿತಿಯನ್ನು ಕೋರ್ಟ್ ಗೆ ವಿವರಿಸಬೇಕು. ನ್ಯಾಯಾಲಯದ ಮೇಲೆ ಪ್ರಭಾವ ಬೀಳುವುದಾದರೆ ಪ್ರತಿಭಟನೆಗಳು ಬೇಕು. ಕುಡಿಯಲು ನೀರು ಮೊದಲು – ಬೆಳೆಗೆ ಆಮೇಲೆ. ಈ ವಾದವನ್ನು ಕೋರ್ಟ್ ನಲ್ಲಿ ಸಮರ್ಥವಾಗಿ ಮಂಡಿಸಬೇಕಾಗುತ್ತದೆ ಎಂದರು.