ಬೆಂಗಳೂರು: ನೈಸ್ ರಸ್ತೆಯಲ್ಲಿ ಲಾರಿಗೆ ಕಾರು ಡಿಕ್ಕಿ ಹೊಡೆದ ದುರ್ಘಟನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದಲ್ಲಿ ಗಾಯಗೊಂಡಿದ್ದ ಮತ್ತೊಂದು ಮಗು ಕೂಡ ಮೃತಪಟ್ಟಿದೆ.
ನಗರದ ಖಾಸಗಿ ಅಸ್ಪತ್ರೆಯಲ್ಲಿ ಪ್ರಣವಿ (6) ಮೃತ ಮಗು. ಇನ್ನು ಬೆಳಗಿನ ಜಾವಾ ಕಾರು ಆಕ್ಸಿಡೆಂಟ್ ಆದ ವೇಳೆ ತಾಯಿ ಸಿಂಧು ಮತ್ತು ಕುಷವಿ (2) ಸಾವನ್ನಪ್ಪಿದ್ದರು. ಒಟ್ಟು ಈಗ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ಬಾಡಿಗೆ ಕಾರನ್ನು ಪಡೆದು ಸಿಂಧು ಮಕ್ಕಳೊಂದಿಗೆ ಐಕಿಯಾಗೆ ಶಾಪಿಂಗ್ ಮಾಡಲೆಂದು ಹೋಗಿದ್ದರು. ಈ ವೇಳೆ ಮೈಸೂರು ರೋಡ್ನಿಂದ ಕನಕಪುರ ರಸ್ತೆಗೆ ಬರುತ್ತಿದ್ದ ವೇಳೆ ಅಪಘಾತವಾಗಿದೆ. ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಬಳಿಕ ಲಾರಿಗೂ ಗುದ್ದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಸಿಂಧು ಹಾಗೂ 2 ಮಗು ಸಾವನ್ನಪ್ಪಿದ್ದರು. ಪತಿ ಮಹೇಂದ್ರನ್ ಹಾಗೂ ಮತ್ತೊಂದು ಮಗುವಿಗೆ ತೀವ್ರ ಗಾಯವಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಆಸ್ಪತ್ರೆಯಲ್ಲಿ ಇನ್ನೊಂದು ಮಗು ಕೂಡ ಸಾವನ್ನಪ್ಪಿದೆ.
ಪತಿಯ ಬ್ಲಡ್ ಸ್ಯಾಂಪಲ್ ಪಡೆಯಲಾಗಿದ್ದು ಮೇಲ್ನೋಟಕ್ಕೆ ಇದು ನಿಯಂತ್ರಣ ತಪ್ಪಿ ಅಪಘಾತ ಆಗಿದೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಕಾರಿನ ಡೀಸೆಲ್ ಟ್ಯಾಂಕ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಎಫ್ಎಸ್ಎಲ್ ಸಿಬ್ಬಂದಿ ಸ್ಥಳದಲ್ಲಿ ಮಹಜರು ನಡೆಸಿದ್ದಾರೆ. ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.