ಉಡುಪಿ, ಅ 03: “ಹಿಂದೂಗಳ ಮೇಲೆ ಚೆಲ್ಲಾಟ ಆಡುವುದನ್ನು ನಿಲ್ಲಿಸಿ ಎಲ್ಲಾ 6 ಕೋಟಿ ಜನರಿಗೆ ನ್ಯಾಯ ಒದಗಿಸಿಕೊಡಿ” ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
“ಶಿವಮೊಗ್ಗ ಘಟನೆ ಇಂದು ವಿಶ್ವದಾದ್ಯಂತದ ಮಾಧ್ಯಮಗಳಲ್ಲಿ ಬಂದರೂ ಕೂಡಾ ಗೃಹ ಸಚಿವರ ಗಮನಕ್ಕೆ ಬಂದಿಲ್ಲ ಎಂಬುವುದು ಹಾಸ್ಯಾಸ್ಪದ ಹೇಳೀಕೆ. ಕರ್ನಾಟಕ ರಾಜ್ಯದ ಕಾನೂನು ಸುವ್ಯವಸ್ಥೆಗೆ ಸರಕಾರ ಯಾವ ರೀತಿ ಗಮನ ಹರಿಸಿದೆ ಎಂಬುವುದನ್ನು ಇದು ತೋರಿಸಿ ಕೊಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ವಿಶ್ವ ಹಿಂದೂ ಪರಿಷತ್ ನ ದೊಡ್ಡ ಕಾರ್ಯಕ್ರಮ ಅಕ್ಟೋಭರ್ 10 ರಂದು ಜರಗಲಿದೆ. ಶಿವಮೊಗ್ಗ ಗಲಭೆಗೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆ ಎಲ್ಲಾ ಜಿಲ್ಲೆಯಲ್ಲಿ ಅಳವಡಿಸಿರುವ ಬ್ಯಾನರ್ ತೆರವಿಗೆ ಸೂಚನೆ ನೀಡಿದ್ದಾರೆ. ಆದರೆ ಕುರಿತು ನಮ್ಮ ಜಿಲ್ಲೆಯ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳನ್ನು ಭೇಟಿ ಮಾಡಿದ್ದೇನೆ. ಈ ಹಿಂದಿನಂತೆ ಜಿಲ್ಲೆಯಲ್ಲಿ ಸಮಾಜೋತ್ಸವಗಳಿಗೆ ಅವಕಾಶ ಮಾಡಿಕೊಟ್ಟಂತೆ ಈ ಬಾರಿ ಕೂಡಾ ಅವಕಾಶ ಮಾಡಬೇಕು ಎಂದು ಮನವಿ ಮಾಡಿದ್ದೇನೆ. ಹೊಸ ವರಿಷ್ಟಾಧಿಕಾರಿ ಬಗ್ಗೆ ನಮಗೆ ಗೌರವ ಇದೆ. ನಮ್ಮ ಮನವಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ.
“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಶಿವಮೊಗ್ಗ ಸೇರಿದಂತೆ ಇತರ ಕಡೆಗಳಲ್ಲಿ ಪಿಎಫ್ ಐ ಮತ್ತು ಇತರ ಸಂಘಟನೆಗಳ ಮೂಲಕ ಹಿಂದೂಗಳ ಮೇಲೆ ಹಲ್ಲೆ ಮಾಡುವ ಕೃತ್ಯ ಆಗುತ್ತಿದೆ. ಹಿಂದೂಗಳ ಭಾವನೆ ಮೇಲೆ ಚೆಲ್ಲಾಟ ಆಡಲು ಹೋಗಬೇಡಿ, ಇವತ್ತು ಅವರ ತಲೆಯಲ್ಲಿ ನಮ್ಮದೇ ಸರಕಾರ ಬಂದಿದೆ ಎಂಬ ಭಾವನೆ ಇದೆ. ಇದರ ಅರ್ಥ ಕಾಂಗ್ರೆಸ್ ಮತ್ತು ಪಿಎಪ್ ಐ ಸಂಘಟನೆಗೆ ವ್ಯತ್ಯಾಸ ಇಲ್ಲ. ಹೀಗಾಗಿ ಅವರು ಉಢಾಫೆಯಾಗಿ ವರ್ತಿಸುತ್ತಿದ್ದಾರೆ. ಸರಕಾರ ಯಾವುದೇ ರೀತಿಯ ಚಕಾರ ತ್ತುತ್ತಿಲ್ಲ. ಉಡುಪಿಯ ಹಿಂದೂ ಸಮಾಜ ಒಗ್ಗಟ್ಟಾಗಿದೆ, ಈ ಸಮಾಜಕ್ಕೆ ಏನಾದರೂ ತೊಂದರೆ ಆದಲ್ಲಿ ಒಗ್ಗಟ್ಟಾಗಿ ಉತ್ತರ ಕೊಡುವುದು ಕೂಡಾ ಗೊತ್ತಿದೆ. ಹಿಂದೂಗಳ ಮೇಲೆ ಚೆಲ್ಲಾಟ ಆಡುವುದನ್ನು ನಿಲ್ಲಿಸಿ ಎಲ್ಲಾ 6 ಕೋಟಿ ಜನರಿಗೆ ನ್ಯಾಯ ಒದಗಿಸಿಕೊಡಿ, ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹೊರತು ಪಡಿಸಿ ಬೇರೆ ಎಲ್ಲಾ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಅಭಿವೃದ್ದಿ ಬಗ್ಗೆ ಸರಕಾರದಿಂದ ಯಾವುದೇ ಸಹಕಾರ ಸಿಗುತಿಲ್ಲ” ಎಂದರು.