ಹೈಸ್ಕೂಲ್ ಸ್ಟೂಡೆಂಟ್ ಮೇಲೆ ಟೀಚರ್ಗೆ ಲವ್! ಈ ಓದು-ಗೀದು ಪುಸ್ತಕದ ಬದನೆಕಾಯಿ ಅಂದ ಮೇಡಂ.. ಆಮೇಲೆ ಏನಾಯ್ತು?

ಬೆಂಗಳೂರು : ವಿದ್ಯೆ ಕಲಿಸಿದ ಗುರುವಿಗೆ ಗುರುಭ್ಯೋ ನಮಃ ಅಂತಾರೆ. ಆದರೆ ಶಿಕ್ಷಣ ಕಲಿಸುವ ಗುರುವೇ ಅಡ್ಡದಾರಿ ಹಿಡಿದರೆ ಹೇಗೆ?. ಇಲ್ಲೊಂದು ಘಟನೆಯಲ್ಲೂ ಹಾಗೆಯೇ ಆಗಿದೆ. 17 ವರ್ಷದ ವಿದ್ಯಾರ್ಥಿಗೆ ಜೊತೆಗೆ ಟೀಚರ್ಗೆ ಪ್ಯಾರ್ಗೆ ಆಗ್ಬುಟ್ಟಿದೆ. ಆಮೇಲೆ ಏನಾಗಿದೆ ಗೊತ್ತಾ?..

ಕ್ರಶ್ ಆಗೋದು ಸಾಮಾನ್ಯ. ಆದರೆ 17 ವರ್ಷದ ವಿದ್ಯಾರ್ಥಿ ಮೇಲೆ ಇಲ್ಲೊಬ್ಬರು ಟೀಚರ್ಗೆ ಕ್ರಶ್ ಆಗಿದೆ. ಅದು ಪ್ರೇಮಕ್ಕೆ ತಿರುಗಿದೆ. ಫೋನ್ ಸಂಭಾಷಣೆಯಲ್ಲಿ ಇಬ್ಬರು ಸುಖ, ದುಃಖ ಹಂಚುವಷ್ಟರಮಟ್ಟಿಗೆ ಇಬ್ಬರು ಇಷ್ಟಪಟ್ಟಿದ್ದಾರೆ.

ತಂದೆಗೆ ಗೊತ್ತಾಯ್ತು ಮಗನ ಕಥೆ

ಇಷ್ಟು ಮಾತ್ರವಲ್ಲ, ಟೀಚರ್ ಮತ್ತು ಸ್ಟೂಡೆಂಟ್ ಆಗಾಗ ಹೊರಗಡೆ ಭೇಟಿ ಕೂಡ ಆಗುತ್ತಿದ್ದರಂತೆ. ಸ್ಕೂಲ್ ಮುಗಿಸಿ ಬಾಲಕ ಕಾಲೇಜ್ಗೆ ಹೋದರು ಟೀಚರ್ಗೆ ಆತನ ಮೇಲೆ ಲವ್ ಮುಂದುವರಿದಿದೆ. ಹೀಗೆ ಒಬ್ಬರನೊಬ್ಬರು ಪ್ರೀತಿಸುತ್ತಿದ್ದ ಟೀಚರ್ ಮತ್ತು ಮಗನ ಕಥೆ ಕೊನೆಗೊಂದು ದಿನ ತಂದೆಗೆ ಗೊತ್ತಾಗಿದೆ.

ಟೀಚರ್ಗೆ ಕೊಟ್ರು ವಾರ್ನಿಂಗ್

ಮಗ ಮತ್ತು ಟೀಚರ್ ನಡುವಿನ ಪ್ರೇಮ ಪುರಾಣ ತಂದೆಗೆ ಗೊತ್ತಾಗಿದೆ. ಕೊನೆಗೆ ಟೀಚರ್ಗೆ ವಾರ್ನಿಂಗ್ ಕೂಡ ಮಾಡಿದ್ದಾರೆ. ಆದರೂ ಸಹ ಇಬ್ಬರ ನಡುವಿನ ಸಂಪರ್ಕ ಮಾತ್ರ ಕಟ್ ಆಗಿರಲಿಲ್ಲ. ಯಾಕೆಂದರೆ ಅ.1ರಂದು ಬಾಲಕನ ಬರ್ತ್ಡೇಯನ್ನು ನೆನಪಿನಲ್ಲಿಟ್ಟುಕೊಂಡಿದ್ದ ಟೀಚರ್, ಆತನೊಂದಿಗೆ ಹುಟ್ಟುಹಬ್ಬವನ್ನು ಕೂಡ ಆಚರಿಸಿದ್ದಾರೆ.

ಅಸಲಿ ಸತ್ಯ ಹೀಗಿದೆ

ಇವಿಷ್ಟು ಮಾತ್ರವಲ್ಲ, ಟೀಚರ್ ಮತ್ತೆ ಸ್ಟೂಡೆಂಟ್ ಪಾರ್ಕ್ಗೆ ಕೂಡ ಹೋಗಿದ್ದಾರೆ. ಆದರೆ ವಾಪಸ್ ಮನೆಗೆ ಬಂದಾಗ ಬಾಲಕನ ಕೈಗೆ ಗಾಯವಾಗಿತ್ತು. ಇದನ್ನ ತಂದೆ ಪ್ರಶ್ನಿಸಿದಾಗ, ಕಾರು ಗ್ಲಾಸ್ ಒಡೆಯಿತು ಎಂದು ಹೇಳಿದ್ದಾನೆ. ಆದರೆ ಮಾರನೇ ದಿನ ಬಾಲಕನ ಸ್ನೇಹಿತನಿಂದ ಆತನ ತಂದೆಗೆ ಅಸಲಿ ವಿಷಯ ಗೊತ್ತಾಗಿದೆ.

ಪಾರ್ಕ್ ಹೋಗಿದ್ದಾಗ ಏನಾಯ್ತು?

ಬಾಲಕ ದೇವಸ್ಥಾನದ ಹೆಸರು ಹೇಳಿ ಟೀಚರ್ ಬಳಿ ಹೋಗಿದ್ದನು. ನಂತರ ಟೀಚರ್ ಕಾಫಿ ಶಾಪ್ನಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಕೇಕ್ ಕಟ್ ಮಾಡಿದ ಬಳಿಕ ಈ ಜೋಡಿ ಪಾರ್ಕ್ಗೆ ಹೋಗಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಟೀಚರ್ ಮದುವೆ ಆಗಬೇಕಿದ್ದ ಗಂಡು ಬಂದಿದ್ದಾನೆ. ಇಬ್ಬರನ್ನೂ ಒಟ್ಟಿಗೆ ನೋಡಿ ಟೀಚರ್ನ ಸೋದರನಿಗೆ ಕರೆ ಮಾಡಿದ್ದಾನೆ.

ಪಾರ್ಕ್ಗೆ ಬಂದ ಟೀಚರ್ ಸಹೋದರನಿಂದ ಬಾಲಕನಿಗೆ ಥಳಿಸಿದ್ದಾನೆ. ಮತ್ತೊಮ್ಮೆ ಟೀಚರ್ ಜೊತೆ ನೋಡಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಈ ವಿಚಾರ ತಿಳಿದು ಬಾಲಕನ ತಂದೆ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

You cannot copy content from Baravanige News

Scroll to Top