ಉಡುಪಿ: ಅಪ್ರತಿಮ ಹುಲಿವೇಷಧಾರಿ ಕಾಡುಬೆಟ್ಟು ಅಶೋಕ್ ರಾಜ್ ಆಸ್ಪತ್ರೆಗೆ ದಾಖಲು; ಕುಟುಂಬಕ್ಕೆ ಬೇಕಿದೆ ದಾನಿಗಳ ಸಹಾಯಹಸ್ತ

ಉಡುಪಿ, ಅ.06: ಉಡುಪಿ ಕಾಡುಬೆಟ್ಟುನಿವಾಸಿ, ಸಂಪ್ರಾದಾಯಕ ಹುಲಿವೇಷಧಾರಿ ಹುಲಿಕುಣಿತದಲ್ಲಿ ತನ್ನದೇ ಆದ ಚಾಪು ಮೂಡಿಸಿದ ಕಾಡುಬೆಟ್ಟು ಅಶೋಕ್ ರಾಜ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಂತಾಜನಕ ಸ್ಥಿತಿಯಲ್ಲಿರುವ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ಚೌತಿಯ ಪ್ರಯುಕ್ತ ಕಳೆದ ಹತ್ತು ದಿನಗಳಿಂದ,ಕೇರಳ.ಹುಬ್ಬಳ್ಳಿ, ತುಮಕೂರು,ಮತ್ತು ಬೆಂಗಳೂರಿನ ಆಯ್ದ ಕಡೆಗಳಲ್ಲಿ ನಿರಂತರವಾಗಿ ತಮ್ಮ ತಂಡದೊಂದಿಗೆ.ಹುಲಿವೇಷ ಧರಿಸಿದ ಕಾಡಬೆಟ್ಟು ತಂಡ ಕೊನೆಯ ಕಾರ್ಯಕ್ರಮ ಇದೇ ಶುಕ್ರವಾರದಂದು ನಡೆಯಲಿತ್ತು,

ಊಟದ ಸಮದಲ್ಲಿ ಏಕಾಏಕಿ ಕುಸಿದು ಬಿದ್ದ ಅವರನ್ನು ತಕ್ಷಣ ಅವರನ್ನು ಬೆಂಗಳೂರಿನ ಸ್ವರ್ಶ ಆಸ್ಪತ್ರೆಗೆ ದಾಖಲಿಸಿ.ನಂತರ ತ್ರೀವ್ರ ಉಸಿರಾಟದ ತೊಂದರೆ ಕಂಡು ಬಂದ ಕಾರಣ .ಹಾಗೂ ನಂತರ ಹೃದಯಾಘಾತವಾದ ಕಾರಣ ಹತ್ತಿರದ ಬೆಂಗಳೂರಿನ ದಯಾನಂದ ಸಾಗರ ಆಸ್ವತ್ರೆಗೆ ವರ್ಗಾಯಿಸಲಾಗಿತ್ತು.

ಇದೀಗ ತ್ರೀವ್ರ ನಿಗಾ ಘಟಕದಲ್ಲಿ ಹೃದಯಸಂಬಂಧಿ ಹಾಗೂ ಮೆದುಳುವಿಗೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಶೋಕ್ ರಾಜ್ ಅವರ ಪುತ್ರಿ ಸುಷ್ಮಾ ರಾಜ್ ತಿಳಿಸಿದ್ದಾರೆ,

ಕಳೆದ 36 ವರ್ಷಗಳಿಂದ ಉಡುಪಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಡುಪಿಯಲ್ಲಿ ಸಾಂಪ್ರದಾಯಿಕ ಹುಲಿವೇಷ ಧರಿಸಿದ್ದ ಅವರು 28 ವರ್ಷಗಳಿಂದ ಹುಲಿವೇಷ ತಂಡ ರಚಿಸಿ ಉಬಯ ಜಿಲ್ಲೆಗಳಲ್ಲಿ ತಂಡವವು ಪ್ರಶಸ್ತಿ ತನ್ನದಾಗಿಸಿಕೊಂಡಿತ್ತು.

ಇವರ ನಾಯಕತ್ವದಲ್ಲಿ ಉಡುಪಿಯಲ್ಲಿ ಹಲವಾರು ಹುಲಿವೇಷಧಾರಿಗಳಿಗೆ ತರಬೇತಿ ನೀಡಿದವರಾಗಿದ್ದು ಗುರುಸ್ಥಾನಹೊಂದಿದ್ದರು.

ಕಳೆದ ವರ್ಷ ಮಣಿಪಾಲದ ಮಾಹೆಯಲ್ಲಿ ಜಾನಪದ ಕಲೆಯಲ್ಲಿ ಹುಲಿವೇಷ ಕುಣಿತ ಹೆಜ್ಜೆ.ಹಾಗೂ ನಲಿಕೆಯ ಅಧ್ಯಯನದ ದಾಖಲೀಕರಣಕ್ಕೆ ಇವರದೇ ತಂಡ ಆಯ್ಕೆಯಾಗಿತ್ತು.

ಇಪ್ಪತ್ತೈದು ವರುಷ ಹಿಂದೆ ಉಡುಪಿಯ ರಾಜಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಬಿಬಿಸಿ ವಾಹಿನಿಯ ತಂಡಕ್ಕೆ ಪ್ರೊಫೆಸರ್ ಎಸ್ ಎ. ಕೃಷ್ಣಯ್ಯರವರ ಮೂಲಕ ಉಡುಪಿಯಲ್ಲಿ ಹುಲಿಕುಣಿತದ ಚಿತ್ರಿಕರಣ ನಡೆದಾಗಲೂ ಅಶೋಕ್ ರಾಜ್ ಅವರ ತಂಡ ಆಯ್ಕೆಯಾಗಿತ್ತು.

ಇದೀಗ ಬೆಂಗಳೂರಿನ ಆಸ್ವತ್ರೆಯಲ್ಲಿ ತ್ರೀವ್ರ ನಿಗಾಘಟಕದಲ್ಲಿದ್ದು ಇನ್ನು ಹತ್ತು ದಿನಗಳ ಕಾಲ ಅವರ ಚೇತರಿಕೆಗೆ ಬೇಕಾಗಬಹುದೆಂದು ವೈದ್ಯರು ತಿಳಿಸಿದ್ದಾರೆ,

ಬೆಂಗಳೂರಿನ ನಲ್ಲಿ ದಿನಕ್ಕೆ ಒಂದು ಲಕ್ಷ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ,

ಈಗಾಗಲೇ. ನಾಲ್ಕೈದು ದಿನ ಕಳೆದಿದ್ದು ಹಣದ ಅಡಚಣೆ ಅಶೋಕ್ ರಾಜ್ ಕುಟುಂಬಕ್ಕೆ ಬಂದೊದಗಿದ್ದು ಹಿರಿಯ ಕಲಾವಿದರ ಕುಟುಂಬ ಆತಂಕದಲ್ಲಿದ್ದು ದಾನಿಗಳ ನಿರೀಕ್ಷೆಯಲ್ಲಿದ್ದಾರೆ.

Scroll to Top