ಅತ್ಲಾಗೆ ಆ ಹುಡುಗಿ, ಇತ್ಲಾಗೆ ಈ ಹುಡುಗಿ.. ಇಬ್ಬರು ಲವ್ವರ್ ಟಾರ್ಚರ್ಗೆ ಜೀವವನ್ನೇ ಕಳೆದುಕೊಂಡ ಯುವಕ

‘ಅತ್ಲಾಗೆ ಆ ಹುಡುಗಿ, ಇತ್ಲಾಗೆ ಈ ಹುಡುಗಿ ಯಾವತ್ತೂ ಇರಬಾರ್ದು ರೀ’ ಎಂದು ಯೋಗರಾಜ್ ಭಟ್ಟರು 2011ರಲ್ಲೇ ಹಾಡಿನ ಮೂಲಕ ಡಂಗೂರ ಸಾರಿದ್ದರು. ಬೇಸರದ ಸಂಗತಿ ಏನಂದರೆ ಇಬ್ಬರು ಪ್ರಿಯತಮೆಯರ ಟಾರ್ಚರ್ಗೆ ಬೆಂಗಳೂರಿನ ಯುವಕನೊಬ್ಬ ಉಸಿರು ಚೆಲ್ಲಿದ್ದಾನೆ.

ಹೌದು,., ಕುಟುಂಬಸ್ಥರು ಮಾಡಿದ ಆರೋಪದಂತೆ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ಇಬ್ಬರು ಲವ್ವರ್ ವಿರುದ್ಧ ಕೇಸ್ ದಾಖಲಾಗಿದೆ.

ಇಲ್ಲಿ ಒಬ್ಬ ಯುವಕ, ಇಬ್ಬರು ಯುವತಿಯರನ್ನ ಪ್ರೀತಿ ಮಾಡಿದ ಪರಿಣಾಮ ಜೀವ ಕಳೆದುಕೊಂಡಿದ್ದಾನೆ.

ಸಂತೋಷ್ ಆತ್ಮಹತ್ಯೆಗೆ ಶರಣಾದ ಯುವಕ.

ಕುಟುಂಬಸ್ಥರ ಆರೋಪ ಏನು.!??

ಕುಟುಂಬಸ್ಥರು ಮಾಡಿರುವ ಆರೋಪದ ಪ್ರಕಾರ, ದುಡುಕಿನ ನಿರ್ಧಾರ ತೆಗೆದುಕೊಂಡ ಸಂತೋಷ್, ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನ ಜೊತೆಗೆ ಈತನ ಇಬ್ಬರು ಪ್ರಿಯತಮೆಯರೂ ಕೆಲಸ ಮಾಡುತ್ತಿದ್ದರು. ಸಹದ್ಯೋಗಿಯಾಗಿ ಪರಿಚಯವಾಗಿ ಪ್ರೇಮಾಂಕುರವಾಗಿ ಮೂಡಿತ್ತು.

ಅಂದಹಾಗೇ ಹಳೇ ಲವರ್ ಜೊತೆ ಯುವಕನದ್ದು ನಾಲ್ಕು ವರ್ಷಗಳ ಪ್ರೇಮ. ಇವರಿಬ್ಬರ ನಡುವೆ ಕೆಲ ತಿಂಗಳ ಹಿಂದೆ ಬ್ರೇಕಪ್ ಆಗಿತ್ತು. ನಂತರ ಅದೇ ಕಂಪನಿಯ ಮತ್ತೊಬ್ಬ ಯುವತಿ ಜೊತೆ ಲವ್ ಆಗಿದೆ. ಇದೇ ವಿಚಾರಕ್ಕೆ ಯುವಕನಿಗೆ ಹಳೇ ಲವರ್ ಕಪಾಳಮೋಕ್ಷ ಮಾಡಿದ್ದಳು. ಮೊದಲಿಗೆ ತನ್ನ ಜೊತೆಯಲ್ಲಿದ್ದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತೀನಿ ಎಂದು ಧಮ್ಕಿ ಹಾಕಿದ್ದಾಳಂತೆ.

ಇದರಿಂದ ಎಚ್ಚೆತ್ತುಕೊಂಡ ಯುವಕ, ಆಗ ಹಳೇ ಲವರ್ ಜೊತೆಯೇ ಮದುವೆ ಆಗುವ ಮಾತುಕತೆ ನಡೆಸಿದ್ದ. ಎರಡೂ ಕುಟುಂಬದವರು ಕುಳಿತು ಮಾತುಕತೆ ನಡೆಸಿ ಮದುವೆಗೆ ಒಪ್ಪಿಗೆ ಸಿಕ್ಕಿತ್ತು. ಇದೇ ವೇಳೆ ಮೊದಲ ಲವರ್ಗೆ ಕಂಪನಿಯಿಂದ ಬೇರೆಡೆ ಟ್ರಾನ್ಸ್ಫರ್ ಆಗುತ್ತದೆ. ಹೊಸ ಲವರ್ ಜೊತೆ ಸೇರಿ ಪ್ರಿಯತಮ ವರ್ಗಾವಣೆ ಮಾಡಿಸಿದ್ದಾನೆ ಎಂದು ಹಳೇ ಗೆಳತಿ ಆರೋಪಿಸುತ್ತಾಳೆ. ಇದೇ ವಿಚಾರಕ್ಕೆ ಯುವಕನಿಗೆ ಕರೆ ಮಾಡಿ ಹಳೇ ಲವರ್ ಬೈದಿದ್ದಾಳೆ ಎನ್ನಲಾಗಿದೆ.

ಇದೀಗ ಇಬ್ಬರು ಲವರ್ಗಳ ಜಗಳಕ್ಕೆ ಬೇಸತ್ತು ಯುವಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ದೂರು ನೀಡಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಡಿಯಲ್ಲಿ ದೂರು ದಾಖಲಾಗಿದೆ. ಪ್ರಕರಣದಲ್ಲಿ ಮೊದಲ ಲವರ್ A1, ಎರಡನೇ ಲವರ್ A2 ಆಗಿದ್ದಾರೆ.

You cannot copy content from Baravanige News

Scroll to Top