ಉಡುಪಿ: ನವೆಂಬರ್ ಅಂತ್ಯದವರೆಗೆ ಪ್ರವಾಸಿಗರಿಗೆ ಪರಶುರಾಮ ಥೀಂ ಪಾರ್ಕ್‌ ವೀಕ್ಷಣೆ ನಿಷೇಧ

ಉಡುಪಿ,ಅ 07: ಕಾರ್ಕಳ ತಾಲೂಕಿನ ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಶುರಾಮ ಥೀಂ ಪಾರ್ಕ್ 27 ಜನವರಿ 2023 ರಂದು ಉದ್ಘಾಟನೆಗೊಂಡು ಪ್ರವಾಸಿಗರ ವೀಕ್ಷಣೆಗೆ ತಾತ್ಕಾಲಿಕವಾಗಿ ಅನುಕೂಲ ಕಲ್ಪಿಸಲಾಗಿತ್ತು.

ಆದರೆ ಸದ್ರಿ ಥೀಂ ಪಾರ್ಕ್‌ ನ ಕಾಮಗಾರಿಯಲ್ಲಿ ಪರಶುರಾಮ ಮೂರ್ತಿಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ, ಮೂರ್ತಿಯ ತುಕ್ಕು ನಿರೋಧಕ ಲೇಪನದ ಹಾಗೂ ಇನ್ನಿತರ ಮುಕ್ತಾಯದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ಸೆಪ್ಟೆಂಬರ್ 2023 ರವರೆಗೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿತ್ತು

ಅ.9 ರಿಂದ ನವೆಂಬರ್ ತಿಂಗಳ ಅಂತ್ಯದವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕಾಲಾವಕಾಶ ಬೇಕಾಗಿರುವುದಾಗಿ ನಿರ್ಮಿತ ಕೇಂದ್ರದವರು ಅ.07.10.2023 ರಂದು ಕೋರಿರುತ್ತಾರೆ.
ಆದ್ದರಿಂದ ಕಾಮಗಾರಿಯ ಪೂರ್ಣಗೊಳಿಸುವ ಉದ್ದೇಶದಿಂದ ಅ.9 ರಿಂದ ನವೆಂಬರ್ ತಿಂಗಳ ಅಂತ್ಯದವರೆಗೆ ಯಾವುದೇ ಸಾರ್ವಜನಿಕರ ಹಾಗೂ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ

You cannot copy content from Baravanige News

Scroll to Top