ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ : ನ.7 ಕ್ಕೆ ಮೊದಲ, ನ.30 ರಂದು ಕೊನೆ ಚುನಾವಣೆ

ನವದೆಹಲಿ : ಕೇಂದ್ರ ಚುನಾವಣಾ ಆಯೋಗ ಇಂದು ಪಂಚರಾಜ್ಯಗಳ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಮಿಜೋರಾಂ, ಮತ್ತು ಛತ್ತೀಸ್‌ಗಡ ರಾಜ್ಯಗಳ ಚುನಾವಣೆಗೆ ಇಂದೇ ಮುಹೂರ್ತ ನಿಗದಿ ಮಾಡಲಾಗುತ್ತಿದೆ.

ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‌ ಕುಮಾರ್ ಸುದ್ದಿಗೋಷ್ಟಿ ನಡೆಸುತ್ತಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಡ ಮತ್ತು ಮಿಜೋರಾಂಗೆ ಇಂದು ಚುನಾವಣಾ ದಿನಾಂಕ ನಿಗದಿಯಾಗಲಿದೆ.

ನವೆಂಬರ್ ಅಂತ್ಯದ ಒಳಗಾಗಿ ಈ ಎಲ್ಲಾ ರಾಜ್ಯಗಳ ಚುನಾವಣೆಗೆ ಸಮಯ ನಿಗದಿಯಾಗಲಿದೆ. ಛತ್ತೀಸ್‌ಗಢ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ.

ಸುದ್ದಿಗೋಷ್ಟಿಯ ಹೈಲೈಟ್ಸ್‌

ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢ, ಮಿಜೋರಾಂಗೆ ಇಂದು ಚುನಾವಣೆ ಘೋಷಿಸುತ್ತಿದ್ದೇವೆ
40 ದಿನಗಳ ಕಾಲ ಕೇಂದ್ರ ಚುನಾವಣಾ ಆಯೋಗ 5 ರಾಜ್ಯಗಳಿಗೂ ಭೇಟಿ ನೀಡಿದೆ
ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಭೇಟಿಯಾಗಿದ್ದೇವೆ, ಅವರ ಸಲಹೆಗಳನ್ನು ಪಡೆದಿದ್ದೇವೆ
ಮಿಜೋರಾಂ ಅಸೆಂಬ್ಲಿ ಅವಧಿ ಡಿಸೆಂಬರ್‌ 17ಕ್ಕೆ ಮುಕ್ತಾಯ
ಪಂಚರಾಜ್ಯದ 679 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ಘೋಷಣೆ ಮಾಡುತ್ತಿದ್ದೇವೆ
ಪಂಚರಾಜ್ಯಗಳಲ್ಲಿ ಒಟ್ಟು 16 ಕೋಟಿ ಮತದಾರರಿದ್ದಾರೆ
ತೆಲಂಗಾಣದಲ್ಲಿ 3.17 ಕೋಟಿ ಮತದಾರರಿದ್ದಾರೆ

ಪಂಚರಾಜ್ಯಗಳ ಚುನಾವಣಾ ದಿನಾಂಕ

ಮಿಜೋರಾಂ- ನವೆಂಬರ್ 7, ಡಿಸೆಂಬರ್ 3ರಂದು ಫಲಿತಾಂಶ
ಛತ್ತೀಸ್‌ಗಢ- ನವೆಂಬರ್ 7, ನವೆಂಬರ್ 17, ಡಿಸೆಂಬರ್ 3ರಂದು ಫಲಿತಾಂಶ
ಮಧ್ಯಪ್ರದೇಶ- ನವೆಂಬರ್ 17, ಡಿಸೆಂಬರ್ 3ರಂದು ಫಲಿತಾಂಶ
ರಾಜಸ್ಥಾನ- ನವೆಂಬರ್ 23, ಡಿಸೆಂಬರ್ 3ರಂದು ಫಲಿತಾಂಶ
ತೆಲಂಗಾಣ- ನವೆಂಬರ್ 30, ಡಿಸೆಂಬರ್ 3ರಂದು ಫಲಿತಾಂಶ

You cannot copy content from Baravanige News

Scroll to Top