ಕುಡಿದ ಮತ್ತಲ್ಲಿ ರಸ್ತೆ ಮಧ್ಯೆಯೇ ಮಲಗಿದ : ಆಂಬ್ಯುಲೆನ್ಸ್‌ ಬಂದ ಕೂಡಲೇ ಎದ್ದು ನಿಂತ ಭೂಪ

ಎಲ್ಲೇ ಮೀರಿದ ಕುಡುಕರಿಗೆ ಹೆಂಡ ಗಂಟಲಲ್ಲಿ ಇಳಿದಾಗ ಮಾಡುವ ಕಿತಾಪತಿ ನೂರೆಂಟು. ತಮ್ಮನ್ನು ಯಾರಾದರೂ ಎಂಟರ್ಟೈನ್ ಮಾಡ್ತಿದ್ದಾರೆ ಅಂತಾ ಗೊತ್ತಾದರೆ ಅವರ ವರಸೆ ಬುಲು ಜೋರಾಗಿಯೇ ಇರುತ್ತದೆ. ಕುಡಿಯೋದೇ ನಮ್ಮ ಬ್ಯುಸಿನೆಸ್ಸು ಅನ್ಕೊಂಡ ಅದೆಷ್ಟೋ ನಶೆ ಪ್ರಿಯರು ದಿನನಿತ್ಯ ಹೆಂಗೆಂಗೋ ಹಾರಾಡ್ತಾರೆ.. ಕೊನೆಗೆ ಎಣ್ಣೆ ಘಾಟು ಗಟ್ಟಿ ಕಿಕ್ ಕೊಟ್ಟಾಗ ಪ್ರಜ್ಞೆತಪ್ಪಿದಂತಾಗಿ ಕೂತಲ್ಲಿ, ನಿಂತಲ್ಲಿ ದಬ್ಬಾಕೋತಾರೆ! ಇಲ್ಲಿ ಆಗಿದ್ದೂ ಅದೇ! ಅದೃಷ್ಟ ಎಂಬಂತೆ ಆತನ ಜೀವ ಉಳಿಸಿದ್ದು ಮಾತ್ರ ಒಂದು ಬೈಕ್ ಇಂಡಿಕೇಟರ್.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದ ಬಳಿ ನಿನ್ನೆ ರಾತ್ರಿ ಕುಡುಕನೊಬ್ಬ ಪ್ರಯಾಣಿಕರ ಜೀವವನ್ನು ಕೈಗೆ ಕೊಟ್ಟುಬಿಟ್ಟಿದ್ದ! ನಡು ರಸ್ತೆಯಲ್ಲಿ ಬೈಕ್ ಬೀಳಿಸಿ ಉದ್ದಂಟ ನಮಸ್ಕಾರ ಮಾಡಿ ಬಿದ್ದಿದ್ದ. ಭೂಮಿಗೆ ಬೆನ್ನು ತಾಗುತ್ತಿದ್ದಂತೆಯೇ ಜೋರಾಗಿ ಗೊರಕೆ ಶುರುಮಾಡಿದ್ದ. ಅದೃಷ್ಟ ಎಂಬಂತೆ ಬೈಕ್ನ ಇಂಡಿಕೇಟರ್ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಪರಿಣಾಮ ಮಧ್ಯೆ ರಾತ್ರಿ ಬರುತ್ತಿದ್ದ ಪ್ರಯಾಣಿಕರ ಗಮನಕ್ಕೆ ಈ ದೃಶ್ಯ ಬಿದ್ದಿದೆ. ಒಂದು ಕ್ಷಣ ದಂಗಾಗಿ ಹೋದ ಇತರೆ ಪ್ರಯಾಣಿಕರು ಭಾರೀ ಅನಾಹುತ ಒಂದನ್ನು ತಪ್ಪಿಸಿದ್ದಾರೆ.

ರಸ್ತೆಯಲ್ಲಿ ಬಿದ್ದಿರೋದನ್ನು ಕಂಡು ‘ಓಹೋ..!!’ ಅಪಘಾತ ಆಗಿದೆ ಅಂತ ಆ್ಯಂಬುಲೆನ್ಸ್ಗೆ ಕರೆ ಮಾಡಿ ಬರುವಂತೆ ತಿಳಿಸುತ್ತಾರೆ. ಯಾವಾಗ ಆ್ಯಂಬುಲೆನ್ಸ್ ಸೈರನ್ ಮಾಡುತ್ತ ಬಂತೋ, ಆಗ ಕುಡುಕನ ನಶೆ ಇಳಿದಿದೆ. ರಸ್ತೆ ಮೇಲೆ ಮಲಗಿ ನಿದ್ದೆಗೆ ಜಾರಿದ್ದವ ಎದ್ದು ನಿಂತು ‘ನಮಸ್ಕಾರ ಸ್ವಾಮಿ’ ಎಂದು ಕೈಮುಗಿದಿದ್ದಾನೆ. ಕುಡುಕನ ಮಳ್ಯಾಸ ಕಂಡ ಸ್ಥಳೀಯರು, ಪ್ರಯಾಣಿಕರು ಗೊಳ್ಳೆಂದು ನಕ್ಕು, ತರಾಟೆ ತೆಗೆದುಕೊಂಡಿದ್ದಾರೆ. ಕೊನೆಗೆ ಬಣಕಲ್ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಷ್ಟಕ್ಕೂ ಈತ ಯಾಕೆ ರಸ್ತೇಲಿ ಮಲಗಿದ್ದ..!!??

ಹಾಸನದಿಂದ ಸಂಬಂಧಿಕರ ಮನೆಗೆ ಬಂದಿದ್ದ ಈತ, ಫುಲ್ ಟೈಟಾಗಿದ್ದ. ಆತನ ನಂಬಿಕೆಯ ದೇವಸ್ಥಾನಕ್ಕೆ ಹೋಗಿ ರಸ್ತೆಯಲ್ಲಿ ಹೋಗುವಾಗ ಧೈರ್ಯ ಬೇಕು ಅಂತಾ ಕಂಠಪೂರ್ತಿ ಕುಡಿದಿದ್ದ ಪುಣ್ಯಾತ್ಮ. ಅಲ್ಲಿಂದ ಬೈಕ್ ಏರಿದ್ದ ಮದ್ಯಪ್ರಿಯ ಹೆಂಗೆಂಗೋ ಡ್ರೈವ್ ಮಾಡಿಕೊಂಡು ಬರುತ್ತಿದ್ದ. ಆದರೇ ಬರುಬರುತ್ತ ಕಿಕ್ ತಡೆದುಕೊಳ್ಳಲಾಗದೇ, ರಸ್ತೆಯಲ್ಲೇ ಬೈಕ್ ಅನ್ನು ಅಂಗಾಂತ ಮಲಗಿಸಿ, ತಾನೂ ಕೂಡ ನಿದ್ರೆಗೆ ಜಾರಿದ್ದ.

You cannot copy content from Baravanige News

Scroll to Top