‘ನಾವು ಕಲ್ಲೆಸೆಯಲ್ಲ, ಕೊಳ್ಳಿ ಇಡಲ್ಲ, ತಲೆ ಒಡೆಯಲ್ಲ’ – ಉಡುಪಿಯ ಹಿಂದೂ ಸಮಾಜೋತ್ಸವದಲ್ಲಿ ಪೇಜಾವರ ಶ್ರೀ

ಉಡುಪಿಯಲ್ಲಿ ನಿನ್ನೆ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಪೇಜಾವರ ಸ್ವಾಮೀಜಿ ಶಿವಮೊಗ್ಗ ಗಲಭೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಎಷ್ಟು ಅಂಗಡಿ, ಎಷ್ಟು ಮನೆಗೆ ಕಲ್ಲು ಬಿತ್ತು? ಎಷ್ಟು ವಾಹನ- ಎಷ್ಟು ಪ್ರಾರ್ಥನಾ ಮಂದಿರಕ್ಕೆ ಬೆಂಕಿ ಬಿತ್ತು? ನಾವು ಹಿಂದೂಗಳು ಶಾಂತಿ ಪ್ರಿಯರು, ಧರ್ಮದ ಪ್ರತೀಕ. ಶ್ರೀರಾಮ ಚಂದ್ರ ನಮಗೆ ಆದರ್ಶ ಎಂದಿದ್ದಾರೆ.

ನಾವು ಕಲ್ಲೆಸೆಯಲ್ಲ, ಕೊಳ್ಳಿ ಇಡಲ್ಲ, ತಲೆ ಒಡೆಯಲ್ಲ. ಒಳ್ಳೆ ವಿಚಾರದಲ್ಲಿ ನಮ್ಮ ಹೃದಯ ಮನೆ ತರೆದಿರುತ್ತದೆ ಅಂತ ಉಡುಪಿಯ ಹಿಂದು ಸಮಾಜೋತ್ಸವದಲ್ಲಿ ಪೇಜಾವರ ಸ್ವಾಮೀಜಿ ಹೇಳಿದ್ದಾರೆ. ಉಡುಪಿ

ಈ ದೇಶದ ಕಣ ಕಣವೂ ಪವಿತ್ರ. ಮಾತೆಯರು ಸ್ವರ್ಗಕ್ಕೆ ಮಿಗಿಲು. ಬಿರುಗಾಳಿ ಬೀಸಿದರೆ ಎದೆಯೊಡ್ಡಿ ನಿಲ್ಲಲೂ ನಾವು ಸಿದ್ಧ. ವಿಹಿಂಪ ಹುಟ್ಟಿ 60 ವರ್ಷವಾದ ಫಲ ಶ್ರೀರಾಮ ಮಂದಿರ ನಿರ್ಮಿಸಲಾಗಿದೆ. ಸನಾತನ ಧರ್ಮವನ್ನು ವಿದೇಶಿಗರು ಅಪ್ಪಿ ಒಪ್ಪಲು ವಿಹಿಂಪ ಕಾರಣ.

ನಮ್ಮ ದೇಶವನ್ನು ಭಾರತ ಎನ್ನಲು ನಾಚಿಕೆ ಹೇಸಿಗೆ ಪಡುವವರರು ಇದ್ದಾರೆ. ದೇಶ ವಿರೋಧಿಗಳು ಒಟ್ಟಾಗುತ್ತಾರೆ ಎಂದರೆ ನಾವೂ ಒಂದಾಗಬೇಕು. ನಮ್ಮ ಸಂಸ್ಕೃತಿ, ದೇಶ, ವೇಷಭೂಷಣಕ್ಕೆ ಬೆಲೆ ಕೊಡುವ ಸರಕಾರವನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಉಡುಪಿಯ ಹಿಂದು ಸಮಾಜೋತ್ಸವದಲ್ಲಿ ಪೇಜಾವರ ಸ್ವಾಮೀಜಿ ಹೇಳಿದ್ದಾರೆ.

Scroll to Top