ಉಡುಪಿ: ಬೇರೆ ಬೇರೆ ಮೊತ್ತದ ಬಿಲ್ ನೀಡಿ ಗ್ರಾಹಕನಿಗೆ ಶಾಕ್ ಕೊಟ್ಟ ಮೆಸ್ಕಾಂ

ಉಡುಪಿ, ಅ.12: ವಾಣಿಜ್ಯ ಮಳಿಗೆಯೊಂದಕ್ಕೆ ಆನ್ ಲೈನ್ ಮತ್ತು ಅಫ್ ಲೈನ್ ನಲ್ಲಿ ಬೇರೆ ಬೇರೆ ಮೊತ್ತದ ಕರೆಂಟ್ ಬಿಲ್ ನೀಡಿ ಮೆಸ್ಕಾಂ ಅಂಗಡಿ ಮಾಲಿಕರಿಗೆ ಶಾಕ್ ನೀಡಿದೆ.

ಇಲ್ಲಿನ ಸಂಸ್ಕೃತ ಕಾಲೇಜಿನ ಎದುರುಗಡೆ ಇರುವ ಸಾಧನಾ ರೆಡಿಮೇಡ್.ಮಳಿಗೆಯ ವಿದ್ಯುತ್ ಬಿಲ್ಲು ಆಫ್ ಲೈನ್ ನಲ್ಲಿ ರೂ,2509 ಎಂದು ಪ್ರಿಂಟ್ ಮಾಡಿ ನೀಡಿರುತ್ತಾರೆ. ಅಕ್ಟೊಬರ್ 15ರಂದು ಕೊನೆಯ ದಿನಾಂಕ ನಿಗದಿಯಾಗಿದ್ದು ಪ್ರತಿಬಾರಿ ಮೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ಲು ನ್ನು ಅಂಗಡಿ ಮಾಲಿಕರು ಆನ್ ಲೈನ್ ಮೂಲಕ ಪೇಮೆಂಟ್ ಮಾಡುತ್ತಿದ್ದರು. ಆದರೆ ಇದೀಗ ಆನ್ ಲೈನ್ ಆ್ಯಪ್ ನಲ್ಲಿ ರೂ 5,70,507 (ಐದು ಲಕ್ಷದ ಎಪ್ಪತ್ತು ಸಾವಿರದ ಐನೂರ ಏಳು) ಎಂದು ತೋರಿಸುತ್ತಿದೆ. ಈಗ ಆನ್ ಲೈನ್ ಪೇಟೆಂಟ್ ನಾಲ್ಕು ದಿನದೊಳಗೆ ಕಟ್ಟಿಎಂದು ಆ್ಯಪ್ ತೋರಿಸುತ್ತಿದು ಅಂಗಡಿ ಮಾಲಕರು ಆನ್ ಲೈನ್ ಬಿಲ್ ನೋಡಿ ದಂಗಾಗಿದ್ದಾರೆ.

ಆನ್ಲೈನ್ ಬಿಲ್ಲಿನಲ್ಲಿರುವ ದೋಷ ಸರಿಪಡಿಸಬೇಕೆಂದು ಮೆಸ್ಕಾಂ ಇಲಾಖೆಯನ್ನು ಅಂಗಡಿಯ ಮಾಲಕರು ಒತ್ತಾಯಿಸಿದ್ದಾರೆ.

You cannot copy content from Baravanige News

Scroll to Top