ಕಾಪು, ಅ.12: ಮಲ್ಲಾರಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಪ್ರಕಾಶ್ (44) ಅವರು ಮಲಗಿದಲ್ಲಿಯೇ ಮೃತಪಟ್ಟ ಘಟನೆ ಅ. 11ರಂದು ಬೆಳಕಿಗೆ ಬಂದಿದೆ.
ವಿವಾಹಿತರಾಗಿದ್ದ ಪ್ರಕಾಶ್ ಅವರ ಪತ್ನಿ ಸುಮನಾ ಸಾಲ್ಯಾನ್ ಅವರು ಕಳೆದ ಐದು ವರ್ಷಗಳಿಂಂದ ಉದ್ಯಾವರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಉಡುಪಿಯ ಸ್ಮಾರ್ಟ್ ಬಜಾರ್ನಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಬುಧವಾರ ಬೆಳಗ್ಗೆ ಜಾಕೀರ್ ಹುಸೇನ್ ಅವರು ಪ್ರಕಾಶ್ ಮೃತಪಟ್ಟಿರುವ ವಿಚಾರ ತಿಳಿಸಿದ್ದರು.
ಉಡುಪಿಯಿಂದ ಮಲ್ಲಾರಿಗೆ ಬಂದು ನೋಡಿದಾಗ ಪ್ರಕಾಶ್ ಮೃತಪಟ್ಟಿದ್ದು ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬಳಿಕ ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ನೇತೃತ್ವದಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವಿಪರೀತ ಕುಡಿತದ ಚಟ ಹೊಂದಿದ್ದ ಪ್ರಕಾಶ್ ಕುಡಿತದಿಂದಾಗಿ ಅಥವಾ ಅನಾರೋಗ್ಯದಿಂದ ಮನೆಯಲ್ಲಿ ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.