IND vs PAK : 4 ಐಜಿ, 21 ಡಿಸಿಪಿ, 7000 ಪೊಲೀಸ್.. ಭಯಂಕರವಾಗಿದೆ ನಾಳಿನ ಪಂದ್ಯಕ್ಕೆ ಭದ್ರತೆ..!

ಕ್ರಿಕೆಟ್ ಲೋಕದ ಮಹಾ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ. ಸದ್ಯ ವಿಶ್ವದ ಚಿತ್ತ ಭಾರತದ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನ ಮೇಲಿದೆ. ಕ್ರಿಕೆಟ್ ಲೋಕದ ಮಹಾಯುದ್ಧಕ್ಕೆ ಅಹಮ್ಮದಾಬಾದ್ನಲ್ಲಿ ಸಿದ್ಧತೆ ನಡೆದಿದೆ.

ವಿಶ್ವದ ಬಹು ನಿರೀಕ್ಷಿತ ಕ್ರಿಕೆಟ್ ಕದನಕ್ಕೆ ಕೌಂಟ್ಡೌನ್ ಶುರುವಾಗಿದೆ. ಸಬರಮತಿಯ ನದಿಯ ತಟದಲ್ಲಿ ನಡೆಯೋ ಕ್ರಿಕೆಟ್ ಪಂದ್ಯ ಇಡೀ ಜಗತ್ತಿನ ಚಿತ್ತವನ್ನ ತನ್ನಡೆ ಸೆಳೆದಿದೆ. ಯಾಕಂದ್ರೆ ಇದೊಂದು ಕೇವಲ ಕ್ರಿಕೆಟ್ ಪಂದ್ಯವಲ್ಲ. ಇದು ಪ್ರತಿಷ್ಠೆಯ ಮಹಾಕಾಳಗ. ಸೋಲು ಅನ್ನೋ ಪದವನ್ನ ಇಲ್ಲಿ ಯಾರೂ ಸಹಿಸಲ್ಲ.. ಕಣಕ್ಕಿಳಿದ ಮೇಲೆ ಮುಗೀತು.. ಗೆಲುವೊಂದೇ ಗುರಿ.

ವಿಶ್ವದ ಯಾವುದೇ ಮೂಲೆಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಕ್ರಿಕೆಟ್ ಬ್ಯಾಟಲ್ಗೆ ಇಳಿಯಲಿ.. ಜಗತ್ತಿನಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗುತ್ತೆ.. ಅಂತದ್ರಲ್ಲಿ, ಭಾರತದ ನೆಲದಲ್ಲಿ ಪಂದ್ಯ ನಡೀತಿದೆ. ಬರೋಬ್ಬರಿ 7 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ ಟೀಮ್ ಇಂಡಿಯಾ ಎದುರು ಹೋರಾಡಲು ಸಜ್ಜಾಗಿದೆ ಅಂದ್ರೆ ಹೇಗಿರಬೇಡ.. ಎಕ್ಸ್ಪ್ಟೇಶನ್ ನೆಕ್ಸ್ಟ್ ಲೆವೆಲ್ನಲ್ಲಿದೆ.


ಮೈದಾನದಲ್ಲಿ ಇಂಡೋ-ಪಾಕ್ ಕದನವನ್ನು ಕಣ್ತುಂಬಿಕೊಳ್ಳೋ ಹಂಬಲ ಕ್ರಿಕೆಟ್ ಅಭಿಮಾನಿಗಳದ್ದಾಗಿದ್ದು, ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನ ಕಿಕ್ಕಿರಿದು ತುಂಬಲಿದೆ. ಎಲ್ಲಾ ಟಿಕೆಟ್ಗಳು ಸೋಲ್ಡ್ ಆಗಿ ತಿಂಗಳೇ ಉರುಳಿವೆ. ಅಹ್ಮದಾಬಾದ್ ಸುತ್ತ ಮುತ್ತಲಿನ ಹೋಟೆಲ್ಗಳೆಲ್ಲಾ ತುಂಬಿ ತುಳುಕಾಡ್ತಿದೆ. ದೇಶ-ವಿದೇಶಗಳ ಗಡಿಯನ್ನ ಮೀರಿ ಫ್ಯಾನ್ಸ್, ಅಹಮದಾಬಾದ್ ನಗರಕ್ಕೆ ಬಂದಿಳಿದಿದ್ದಾರೆ.

ಅಹಮದಾಬಾದ್ ನಗರದ ಸುತ್ತ ಖಾಕಿ ಕಣ್ಗಾವಲು

ನಿರೀಕ್ಷೆಗಿಂತಲೂ ಹೆಚ್ಚು ಫ್ಯಾನ್ಸ್ ಪಂದ್ಯ ವೀಕ್ಷಿಸಲು ಅಹ್ಮದಾಬಾದ್ ನಗರಕ್ಕೆ ಬಂದಿದ್ದಾರೆ. ಎರಡೂ ತಂಡಗಳು ಆಟಗಾರರು ಸ್ಥಳವನ್ನ ತಲುಪಿದ್ದಾಗಿದೆ. ಈಗ ಸುರಕ್ಷಿತವಾಗಿ ಪಂದ್ಯವನ್ನ ನಡೆಸೋ ಜವಾಬ್ದಾರಿ ಬಿದ್ದಿರೋದು ಬಿಸಿಸಿಐ ಹೆಗಲಿಗೆ. ಈ ನಿಟ್ಟಿನಲ್ಲಿ ಬಿಸಿಸಿಐ, ಗುಜರಾತ್ ಸರ್ಕಾರ ಹಾಗೂ ರಾಜ್ಯ ಪೊಲೀಸ್ ಇಲಾಖೆಯ ಸಹಾಯಹಸ್ತ ಕೋರಿದೆ. ಸದ್ಯ ಬಿಗಿ ಬಂದೋಬಸ್ತ್ ಕೈಗೊಳ್ಳಲು ಪೊಲೀಸ್ ಇಲಾಖೆ, ಕೇಂದ್ರ ರಕ್ಷಣಾ ಇಲಾಖೆ ಜಂಟಿಯಾಗಿ ಅಖಾಡಕ್ಕಿಳಿದಿವೆ.

ಸಿಎಂ, ಹೋಮ್ ಮಿನಿಸ್ಟರ್ ಹೈವೋಲ್ಟೆಜ್ ಮೀಟಿಂಗ್

ಇಂಡೋ-ಪಾಕ್ ಪಂದ್ಯಕ್ಕೆ ಹೈ ಸೆಕ್ಯೂರಿಟಿ ಕಲ್ಪಿಸೋ ನಿಟ್ಟಿನಲ್ಲಿ ಗುಜರಾತ್ ಸಿಎಂ ಭೂಪೆಂದ್ರ ಪಟೆಲ್ ಹಾಗೂ ಹೋಮ್ ಮಿನಿಸ್ಟರ್ ಹರ್ಷ್ ಸಂಗ್ವಿ ವಿಶೇಷ ಸಭೆ ನಡೆಸಿದ್ದಾರಂತೆ. ಈ ಸಭೆಯಲ್ಲಿ ಪೊಲೀಸ್ ಇಲಾಖೆ ಉನ್ನತ ಮಟ್ಟ ಅಧಿಕಾರಿಗಳು ಕೂಡ ಭಾಗಿಯಾಗಿದ್ದು, ಪೊಲೀಸ್ ಸಿಬ್ಬಂದಿಗಳ ನಿಯೋಜನೆ, ಸೂಕ್ಷ್ಮ ಪ್ರದೇಶ ಮೇಲೆ ಕಣ್ಗಾವಲು ಸೇರಿದಂತೆ ಹಲವು ಚರ್ಚೆ ನಡೆಸಿ ಪ್ರಮಖ ನಿರ್ಧಾರ ಕೈಗೊಂಡಿದ್ದಾರೆ.

ಕ್ರೀಡಾಂಗಣದ ಸುತ್ತ ಖಾಕಿ ಸರ್ಪಗಾವಲು

4 ಐಜಿ & ಡಿಜಿಗಳು, 21 ಡಿಸಿಪಿಗಳು
3 ಆ್ಯಂಟಿ ಡ್ರೋನ್ ಟೀಮ್
9 ಬಾಂಬ್ ನಿಷ್ಕ್ರಿಯ ದಳ
7 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ
4000 ಹೋಮ್ ಗಾರ್ಡ್ ನಿಯೋಜನೆ
ಸಶಸ್ತ್ರ ಮೀಸಲು ಪಡೆಯ 13 ತಂಡ
SDRF ಹಾಗೂ NDRF ಸಿಬ್ಬಂದಿ

ಒಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಪಡೆಯಂತೂ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಿದೆ. ಆಟಗಾರರು, ಪಂದ್ಯವನ್ನ ನೋಡಲು ಬರೋ ಸೆಲೆಬ್ರಿಟಿಗಳು, ಇವರ ಜೊತೆಗೆ ದೇಶ- ವಿದೇಶದಿಂದ ಬರೋ ಅಸಂಖ್ಯ ಫ್ಯಾನ್ಸ್.. ಇವರೆಲ್ಲರನ್ನ ಕಾಪಾಡೋದ್ರ ಜೊತೆಗೆ ಪಂದ್ಯ ಕೂಡ ಸುಗಮವಾಗಿ ನಡೆಯುವಂತೆ ಮಾಡೋ ಜವಾಬ್ದಾರಿ ಇದೀಗ ರಕ್ಷಣಾ ಸಿಬ್ಬಂದಿಗಳ ಹೆಗೆಲೇರಿದೆ. ಇಂದೂ ಸೇರಿ ಮುಂದಿನ ಎರಡು ದಿನಗಳ ಕಾಲ ಎಲ್ಲವನ್ನೂ ತ್ಯಜಿಸಿ, ಕಾಯುವ ಸಿಬ್ಬಂದಿಗಳಿಗೆ ಸಲಾಂ ಹೇಳಲೇಬೇಕು..

Scroll to Top