ಸ್ನೇಹಿತರೊಂದಿಗೆ ಖಾಸಗಿ ಕ್ಷಣ ಕಳೆಯಲು ಪಾಪಿ ಪತಿಯ ಒತ್ತಾಯ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ

ಬೆಂಗಳೂರು,: ತನ್ನ ಸ್ನೇಹಿತರ ಜೊತೆ ಖಾಸಗಿ ಕ್ಷಣ ಕಳೆಯಲು ಪಾಪಿ ಪತಿರಾಯನ ಒತ್ತಾಯಕ್ಕೆ ಬೇಸತ್ತ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಂಗಳೂರು ಮೂಲದ ವಿಕೃತ ಪತಿ ಸುಧೀರ್ ಪೈ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪತ್ನಿ ದೂರು ದಾಖಲಿಸಿದ್ದಾರೆ.

ತನ್ನ ಸ್ನೇಹಿತರ ಜೊತೆ ಸಂಪರ್ಕ ಬೆಳೆಸುವಂತೆ ಸುಧೀರ್ ಬೇಡಿಕೆಯನ್ನ ನಿರಾಕರಿಸಿದ್ದಕ್ಕೆ ಹಲ್ಲೆ ಕೂಡ ಮಾಡಿರುವುದಾಗಿ ಪತ್ನಿ ದೂರಿನಲ್ಲಿ ತಿಳಿಸಿದ್ದು, ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನೀಡಿರುವ ಆರೋಪ ಮಾಡಿದ್ದಾರೆ.

ಗಂಡನ ವಾಟ್ಸಪ್ ಚೆಕ್ ಮಾಡಿದಾಗ ಅನೇಕ ಅಶ್ಲೀಲ ಮೆಸೇಜ್ ಹಾಗೂ ಲೈಂಗಿಕ ಕಾರ್ಯಕರ್ತೆಯರ ಬೆಲೆ ಬಗ್ಗೆ ಚಾಟ್ ಗಳಿದ್ದವಂತೆ. ಇದನ್ನ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.

You cannot copy content from Baravanige News

Scroll to Top