ಮಾಜಿ ವಿಶ್ವ ಸುಂದರಿ ಶೆರಿಕಾ ಡಿ ಅರ್ಮಾಸ್ ನಿಧನರಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಕಳೆದ ಬುಧವಾರದಂದು ಸಾವನ್ನಪ್ಪಿದ್ದಾರೆ.
26 ವರ್ಷ ವಯಸ್ಸಿನ ಶೆರಿಕಾ ಡಿ ಅರ್ಮಾಸ್ ಕೀಮೋಥೆರಪಿ ಮತ್ತು ರೇಡಿಯೋಥೆರಪಿ ಸೇರಿ ಹಲವಾರು ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸಣ್ಣ ವಯಸ್ಸಿನಲ್ಲೇ ಅಸುನೀಗಿದ್ದಾರೆ.
ಶೆರಿಕಾ ಡಿ ಅರ್ಮಾಸ್ 2015ರಲ್ಲಿ ಉರುಗ್ವೆ ದೇಶದಿಂದ ಪ್ರತಿನಿಧಿಸಿದ್ದರು. ಆದರೆ ಗರ್ಭಕಂಠದ ಕ್ಯಾನ್ಸರ್ಗೆ ತುತ್ತಾಗಿ ಕಳೆದ ಶನಿವಾರದಂದು ಕೊನೆಯುಸಿರೆಳೆದಿದ್ದಾರೆ. ಇವರ ಸಾವಿಗೆ ಸ್ನೇಹಿತರು, ಕುಟುಂಬಸ್ಥರು, ಗಣ್ಯರು ಕಂಬನಿ ಮಿಡಿದಿದ್ದಾರೆ.