26 ವಾರಗಳ ನಂತರ ಮಹಿಳೆ ಗರ್ಭಪಾತಕ್ಕೆ ಇಲ್ಲ ಅವಕಾಶ- ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ, ಅ.16: 26 ವಾರದ ನಂತರ ಮಹಿಳೆಯ ಗರ್ಭಪಾತಕ್ಕೆ ಮಾಡಿದ್ದ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್‌ ಮಹತ್ವದ ಆದೇಶ ನೀಡಿದೆ.

ತಮಗೆ ಈಗಾಗಲೇ 2 ಮಕ್ಕಳಿದ್ದಾರೆ. ಅರಿವಿಲ್ಲದೇ ಗರ್ಭಿಣಿಯಾಗಿದ್ದಾಗಿ 27 ವರ್ಷದ ಮಹಿಳೆಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ವಿವಾಹಿತ ಮಹಿಳೆಯ ಅಬಾಷನ್ ಮನವಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

ಮಹಿಳೆಯ ಅಬಾಷನ್ ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ತಾಯಿಯ ಆಯ್ಕೆಗಿಂತ ಭ್ರೂಣದಲ್ಲಿ ಜೀವಿಸುವ ಮಗುವಿನ ಹಕ್ಕು ಮುಖ್ಯ. ಮಗುವನ್ನು ಪೋಷಕರು ಬೇರೆಯವರಿಗೆ ದತ್ತು ನೀಡಬಹುದು. ದತ್ತು ಕೇಂದ್ರಗಳು ಪೋಷಕರಿಗೆ ಈ ನಿಟ್ಟಿನಲ್ಲಿ ನೆರವಾಗಲಿವೆ ಎಂದಿದೆ. ದೆಹಲಿಯ ಏಮ್ಸ್ ಆಸ್ಪತ್ರೆ ವೈದ್ಯರ ವರದಿ ಆಧಾರದ ಮೇಲೆ ಸುಪ್ರೀಂಕೋರ್ಟ್‌ ಈ ಮಹತ್ವದ ಆದೇಶ ನೀಡಿದೆ.

ತಮ್ಮ ಹಣಕಾಸು, ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಅಬಾಷನ್‌ಗೆ ಮಹಿಳೆ ಅನುಮತಿ ಕೋರಿದ್ದರು. ಈ ಮನವಿಯನ್ನು ನಯವಾಗಿ ತಿರಸ್ಕರಿಸಿರುವ ನ್ಯಾಯಾಲಯ, ಮಹಿಳೆಯ ಅಬಾಷನ್ ಮನವಿಯನ್ನು ತಿರಸ್ಕರಿಸಿದೆ.

ಸಂವಿಧಾನದ 142ನೇ ವಿಧಿಯನ್ನು ಎಲ್ಲಾ ಕೇಸ್‌ನಲ್ಲೂ ಬಳಸಲಾಗಲ್ಲ. ಸೂಕ್ತ ಸಮಯದಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮಹಿಳೆಗೆ ಡೆಲಿವರಿ ಮಾಡಬಹುದು. ಗರ್ಭಿಣಿಯ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲಿ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಏಮ್ಸ್‌ ವೈದ್ಯರು ಗರ್ಭಿಣಿ ತೆಗೆದುಕೊಳ್ಳುತ್ತಿರುವ ಔಷಧಿಗಳಿಂದ ಭ್ರೂಣಕ್ಕೆ ತೊಂದರೆ ಇಲ್ಲ. ಭ್ರೂಣದಲ್ಲಿ ಅಸಹಜ ಬೆಳವಣಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

You cannot copy content from Baravanige News

Scroll to Top