ಬಸ್‌ನಲ್ಲಿ ಮಗುವನ್ನು ಮರೆತ ದಂಪತಿ.!!

ಕುಂಬಳೆ : ಮೂವರು ಮಕ್ಕಳೊಂದಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಒಂದು ಮಗುವನ್ನು ಮರೆತು ಬಸ್‌ನಲ್ಲಿ ಬಿಟ್ಟು ಇಳಿದು ಮನೆಗೆ ತೆರಳಿದ್ದು, ಸಹಪ್ರಯಾಣಿಕರೊಬ್ಬರ ಸಮಯ ಪ್ರಜ್ಞೆಯಿಂದ ಮಗು ಹೆತ್ತವರ ಮಡಿಲು ಸೇರಿದ ಘಟನೆ ನಡೆದಿದೆ.

ಉಪ್ಪಳದಿಂದ ಮೂವರು ಮಕ್ಕಳೊಂದಿಗೆ ಬಸ್ಸೇರಿದ ದಂಪತಿ ಬಂದ್ಯೋಡ್‌ ಗೆ ಟಿಕೆಟ್‌ ಪಡೆದಿದ್ದರು. ಬಂದ್ಯೋಡ್‌ ತಲುಪಿದಾಗ ಪತಿ ಒಂದು ಮಗುವಿನೊಂದಿಗೆ ಒಂದು ಬಾಗಿಲಲ್ಲಿ ಇಳಿದರೆ, ತಾಯಿ ಇನ್ನೊಂದು ಮಗುವಿನೊಂದಿಗೆ ಮತ್ತೊಂದು ಬಾಗಿಲಲ್ಲಿ ಇಳಿದರು.

ಇನ್ನೊಂದು ಸೀಟಿನಲ್ಲಿ ಕುಳಿತಿದ್ದ ಮತ್ತೊಂದು ಮಗು ಅಲ್ಲೇ ಉಳಿಯಿತು. ಆ ಸೀಟ್‌ನಲ್ಲಿದ್ದ ವ್ಯಕ್ತಿ ಕುಂಬಳೆಯಲ್ಲಿ ಇಳಿಯಲು ಸಿದ್ಧನಾಗುತ್ತಿದ್ದಂತೆ ಬಸ್‌ನಲ್ಲಿ ಮಗು ಮಾತ್ರ ಉಳಿದಿರುವುದು ತಿಳಿಯಿತು. ಬಸ್ಸನ್ನು ಪೊಲೀಸ್‌ ಠಾಣೆಗೆ ಕೊಂಡೊಯ್ಯಲಾಯಿತು.

ಈ ವಿಷಯ ವೈರಲ್‌ ಆಗುತ್ತಿದ್ದಂತೆ ಮಗುವಿನ ಹೆತ್ತವರು ಠಾಣೆಗೆ ಬಂದರು. ಮಗುವನ್ನು ಅವರಿಗೆ ಹಸ್ತಾಂತರಿಸಲಾಯಿತು..

You cannot copy content from Baravanige News

Scroll to Top