ನವದೆಹಲಿ : 2008ರಲ್ಲಿ ನಡೆದ ದೆಹಲಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ (25) ಕೊಲೆ ಕೇಸ್ನಲ್ಲಿ ಐವರು ಆರೋಪಿಗಳಿಗೆ ದೆಹಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಏನಿದು ಪ್ರಕರಣ..?
ಹೆಡೈನ್ಸ್ ಟುಡೇ ಸುದ್ದಿ ವಾಹಿನಿಯಲ್ಲಿ ಪತ್ರಕರ್ತೆಯಾಗಿ ಸೌಮ್ಯಾ ವಿಶ್ವನಾಥನ್ (25) ಕೆಲಸ ಮಾಡುತ್ತಿದ್ದರು. 2008ರ ಸೆಪ್ಟೆಂಬರ್ 30ರಂದು ಕಚೇರಿಯಿಂದ ಮನೆಗೆ ಹೋಗುತ್ತಿದ್ದಾಗ ತಮ್ಮ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸ್ ಅಧಿಕಾಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆರಂಭದಲ್ಲಿ ಕಾರು ಅಪಘಾತದಲ್ಲಿ ಪತ್ರಕರ್ತೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.
ಇನ್ನೂ ಈ ಕುರಿತು ತೀವ್ರವಾಗಿ ತನಿಖೆ ನಡೆಸಿದ್ದಾಗ ಈ ಘಟನೆ ಹಿಂದಿನ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಹೌದು ಪತ್ರಕರ್ತೆಯಾಗಿ ಸೌಮ್ಯಾ ವಿಶ್ವನಾಥನ್ ಅವರು 2008ರ ಸೆಪ್ಟೆಂಬರ್ 30ರಂದು ಕಚೇರಿಯಿಂದ ಮನೆಗೆ ಹೋಗುತ್ತಿದ್ದಾಗ ಕೆಲ ದುಷ್ಕರ್ಮಿಗಳು ಏಕಾಏಕಿ ಕಾರಿನಲ್ಲಿ ಬಂದು ಗುಂಡಿಕ್ಕಿ ಕೊಂದಿದ್ದರು. ಇದೀಗ ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ರವಿ ಕಪೂರ್, ಅಮಿತ್ ಶುಕ್ಲಾ, ಅಜಯ್ ಕುಮಾರ್, ಬಲ್ಲೀಷ್ ಮಲಿಕ್ ಮತ್ತು ಅಜಯ್ ಸೇಥಿ ಐದು ಆರೋಪಿಗಳನ್ನು ಸಾಕೇತ್ ನ್ಯಾಯಾಲಯ ದೋಷಿಗಳು ಎಂದು ಘೋಷಿಸಿ ತೀರ್ಪು ನೀಡಿದೆ.