ಕುಕ್ಕರ್ ಬ್ಲಾಸ್ಟ್ ಸಕ್ಸಸ್ ಆಗ್ತಿದ್ರೆ ಉಡುಪಿ ಮಠದ ಮೇಲಿತ್ತು ಉಗ್ರರ ಕಣ್ಣು ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎನ್ಐಎ

ಶಿವಮೊಗ್ಗ : ಶಂಕಿತ ಉಗ್ರ ಅರಾಫತ್ ಅಲಿ ವಿಚಾರಣೆ ವೇಳೆ ಸ್ಫೋಟಕ ಸತ್ಯ ಹೊರಬಿದ್ದಿದೆ. ಎನ್ ಐ ಎ ತನಿಖೆ ವೇಳೆ ತೀರ್ಥಹಳ್ಳಿ ಬ್ರದರ್ಸ್ ಟಾರ್ಗೆಟ್ ಹಾಕಿಕೊಂಡ ಕರ್ನಾಟಕದಲ್ಲಿ ಮೂರು ಸ್ಥಳಗಳ ಬಗ್ಗೆ ಅರಾಫತ್ ಅಲಿ ಬಾಬ್ಬಿಟ್ಟಿದ್ದಾನೆ.

ಐಸಿಸ್ ಉಗ್ರರು ಮಂಗಳೂರು ಕದ್ರಿ ದೇವಸ್ಥಾನಕ್ಕೆ ಟಾರ್ಗೇಟ್ ಹಾಕಿಕೊಂಡಿರುವುದು ತನಿಖೆ ವೇಳೆ ಬಯಲಾಗಿತ್ತು. ಆದರೀಗ ಉಡುಪಿ ಮಠ ಉಗ್ರರ ಟಾರ್ಗೆಟ್ ಅಗಿತ್ತು ಅನ್ನೋ ಸ್ಫೋಟಕ ರಹಸ್ಯ ಬಯಲಾಗಿದೆ. ಉಡುಪಿ ಮಠದ ಜೊತೆಗೆ ಚಿಕ್ಕಮಗಳೂರು ಬಿಜೆಪಿ ಕಚೇರಿಯೂ ಟಾರ್ಗೆಟ್ ಹಾಕಿಕೊಂಡಿದ್ದರು ಎಂಬ ಮಾಹಿತಿ ತನಿಖೆ ವೇಳೆ ಹೊರಬಿದ್ದಿದೆ.

ಐಸಿಸ್ ಮಾಡೆಲ್ ಕೇಸ್ ವಿಚಾರವಾಗಿ ಕಳೆದ ಮೂರು ದಿನದಿಂದ ಎನ್ಐಎ ತಂಡ ಮಲೆನಾಡಲ್ಲಿ ಬೀಡು ಬಿಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಈಗಾಲೇ ತೀರ್ಥಹಳ್ಳಿಯ ನಾಲ್ವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.

ಕದ್ರಿ ಬ್ಲಾಸ್ಟ್ ಸಕ್ಸಸ್ ಆಗಿದ್ರೆ ನಂತರ ಉಡುಪಿ ಮಠ ಹಾಗೂ ಚಿಕ್ಕಮಗಳೂರು ಬಿಜೆಪಿ ಕಚೇರಿ ಟಾರ್ಗೇಟ್ ಆಗಿತ್ತು. ಆದರೆ ಕದ್ರಿ ದೇವಸ್ಥಾನ ತಲುಪುವ ಮುನ್ನವೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಹೀಗಾಗಿ ಉಡುಪಿ ಕೃಷ್ಣ ಮಠ ಹಾಗೂ ಚಿಕ್ಕಮಗಳೂರು ಬಿಜೆಪಿ ಕಚೇರಿ ಬ್ಲಾಸ್ಟ್ ಪ್ಲಾನ್ ಪ್ಲಾಫ್ ಆಗಿದೆ.

Scroll to Top