ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರು ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆ ಚಮಕ್ ಕೊಟ್ಟಿದ್ದಾರೆ. ತಮ್ಮ ಅಧಿಕೃತ X ಖಾತೆಯಲ್ಲಿ ನಾವು ಬೇರೆ ಆಗಿದ್ದೇವೆ. ಈ ಸಂಕಷ್ಟದ ಸಮಯದಲ್ಲಿ ದಯವಿಟ್ಟು ನಮಗೆ ಸಮಯ ನೀಡಿ ಎಂದು ಪೋಸ್ಟ್ ಮಾಡಿದ್ದರು. ರಾಜ್ ಕುಂದ್ರಾ ಅವರ ಈ ಪೋಸ್ಟ್ ಬಾಲಿವುಡ್ ಅಂಗಳದಲ್ಲಿ ಹಲ್ಚಲ್ ಸೃಷ್ಟಿಸಿತ್ತು.
ಇಷ್ಟು ದಿನ ನಟಿ ಶಿಲ್ಪಾ ಶೆಟ್ಟಿ ಜೊತೆ ಮುಖವಾಡ ಧರಿಸಿ ಓಡಾಡುತ್ತಿದ್ದ ರಾಜ್ ಕುಂದ್ರಾ ಅವರು ಮಾಡಿದ ಒಂದು ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ರಾಜ್ ಕುಂದ್ರಾ ಅವರು ಶಿಲ್ಪಾಶೆಟ್ಟಿಗೆ ವಿಚ್ಛೇದನ ಕೊಡುತ್ತಿದ್ದಾರಾ. ಶಿಲ್ಪಾಶೆಟ್ಟಿಯಿಂದ ಬೇರೆ ಆಗುತ್ತಿದ್ದಾರೆ ಅಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿತ್ತು. ಶಿಲ್ಪಾಶೆಟ್ಟಿ, ರಾಜ್ಕುಂದ್ರಾ ಅವರ ಡಿವೋರ್ಸ್ ಬಗ್ಗೆ ಚರ್ಚೆಯಾಗುತ್ತಲೇ ರಾಜ್ ಕುಂದ್ರಾ ಅವರು ತಮ್ಮ ಪೋಸ್ಟ್ ವಿವಾದಕ್ಕೆ ತೆರೆ ಎಳೆದಿದ್ದಾರೆ.
ರಾಜ್ ಕುಂದ್ರಾ ಅವರು ತಮ್ಮ ಬಹುನಿರೀಕ್ಷಿತ UT69 ಚಿತ್ರದ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಈ ಚಿತ್ರದ ಪ್ರಮೋಷನ್ಗಾಗಿ ಹೀಗೆಲ್ಲಾ ಗಿಮಿಕ್ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಈ ಪೋಸ್ಟ್ ವೈರಲ್ ಆದ ಬಳಿಕ ರಾಜ್ ಕುಂದ್ರಾ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ರಾಜ್ ಕುಂದ್ರಾ ಅವರು ಈ ಹಿಂದೆ ಬಳಸುತ್ತಿದ್ದ ಮಾಸ್ಕ್ನ ವಿಡಿಯೋಗಳಿದೆ. ಸದ್ಯ ರಾಜ್ ಕುಂದ್ರಾ ಅವರು ತಮ್ಮ ಮಾಸ್ಕ್ಗೆ ವಿದಾಯ ಹೇಳುತ್ತಿದ್ದಾರೆ. ನನ್ನ ಮಾಸ್ಕ್ನಿಂದ ಬೇರೆ ಆಗುವ ಕಾಲ ಬಂದಿದೆ. ಕಳೆದ 2 ವರ್ಷಗಳಿಂದ ನನ್ನನ್ನು ರಕ್ಷಣೆ ಮಾಡಿದ್ದಕ್ಕೆ ಧನ್ಯವಾದಗಳು. ನನ್ನ ಜೀವನದ ಜರ್ನಿ ಮುಂದಿನ ಹಂತದಲ್ಲಿ ಸಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನನ್ನ ಬಲಕ್ಕೆ 88 ಕೊಲೆಗಳ ಆರೋಪಿ, ಎಡಕ್ಕೆ ರೇಪ್ ಕೇಸ್ನ ವ್ಯಕ್ತಿ ಮಲಗುತ್ತಿದ್ದರು- ಜೈಲಿನ ಕರಾಳ ಸ್ಥಿತಿ ಬಿಚ್ಚಿಟ್ಟ ಶಿಲ್ಪಾಶೆಟ್ಟಿ ಪತಿ..!
ರಾಜ್ ಕುಂದ್ರಾ ಅವರು ನಾವು ಬೇರೆ ಆಗಿದ್ದೇವೆ ಎಂದು ಪೋಸ್ಟ್ ಮಾಡಿದ್ದು ಶಿಲ್ಪಾ ಶೆಟ್ಟಿ ಅವರ ಬಗ್ಗೆಯಲ್ಲ. ತಮ್ಮ ಮಾಸ್ಕ್ನಿಂದ ಬೇರೆ ಆಗಿದ್ದೇನೆ ಎಂದು ಹೇಳುವ ಮೂಲಕ ಎಲ್ಲರನ್ನು ಯಾಮಾರಿಸಿದ್ದರು. ಇದೀಗ ಶಿಲ್ಪಾಶೆಟ್ಟಿ ಅವರಿಂದ ಬೇರೆ ಆಗುವುದಲ್ಲ. ಎರಡು ವರ್ಷದಿಂದ ಬಳಸುತ್ತಿದ್ದ ಮಾಸ್ಕ್ನಿಂದ ಬೇರೆ ಆಗಿದ್ದೇನೆ ಎನ್ನುತ್ತಾ ವಿವಾದಗಳಿಗೆಲ್ಲ ಫುಲ್ ಸ್ಟಾಪ್ ಇಟ್ಟಿದ್ದಾರೆ.