ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಗುಡ್‌ನ್ಯೂಸ್.. ಒಂದೇ ಫೋನ್‌ನಲ್ಲಿ ಎರಡು ಅಕೌಂಟ್‌ ಪರಿಚಯಿಸಲು ಪ್ಲಾನ್; ಏನಿದು..!??

ವಾಟ್ಸ್‌ಆ್ಯಪ್ ಬಳಕೆದಾರರ ಬಹುದಿನದ ಬೇಡಿಕೆಗೆ ಮೆಟಾ ಕಂಪನಿಯ ಸಿಇಒ ಮಾರ್ಕ್ ಜುಕರ್ ಬರ್ಗ್‌ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಒಂದೇ ಫೋನ್‌ನಲ್ಲಿ ಎರಡು ವಾಟ್ಯ್‌ಆ್ಯಪ್‌ ಅಕೌಂಟ್‌ ಬಳಸುವ ಸೇವೆ ಪರಿಚಯಿಸುವುದಾಗಿ ಜುಕರ್‌ ಬರ್ಗ್‌ ಹೇಳಿದ್ದಾರೆ.

ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು ಈ ಯೋಜನೆಯನ್ನು ಪ್ರಕಟ ಮಾಡಿದ್ದಾರೆ.

ವಾಟ್ಸ್‌ಆ್ಯಪ್‌ ಬಳಕೆದಾರರು ಒಂದೇ ಫೋನ್‌ನಲ್ಲಿ ಖಾಸಗಿ ಅಕೌಂಟ್ ಹಾಗೂ ಆಫೀಸ್‌ ಅಕೌಂಟ್‌ಗಳನ್ನು ಬಳಸಲು ಮನವಿ ಮಾಡಿಕೊಂಡಿದ್ದರು. ಬಹಳಷ್ಟು ಕಾರ್ಪೊರೇಟ್ ಕಂಪನಿಗಳಿಂದಲೂ ಬೇಡಿಕೆಗಳು ಬಂದ ಹಿನ್ನೆಲೆಯಲ್ಲಿ ಮೆಟಾ ಕಂಪನಿಯ ಸಿಇಒ ಮಾರ್ಕ್ ಜುಕರ್‌ ಬರ್ಗ್ ಈ ಒಂದು ಅವಕಾಶವನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಶೀಘ್ರದಲ್ಲೇ ವಾಟ್ಸ್‌ಆ್ಯಪ್ ಗ್ರಾಹಕರು ಒಂದೇ ಫೋನ್‌ನಲ್ಲಿ ಒಂದೇ ಬಾರಿಗೆ ಎರಡು ಅಕೌಂಟ್‌ಗಳಲ್ಲಿ ಲಾಗ್ ಇನ್ ಆಗಬಹುದು. ಇಷ್ಟು ದಿನ ಒಂದೇ ಬಾರಿಗೆ ಆಫೀಸ್ ಅಕೌಂಟ್ ಜೊತೆಗೆ ಖಾಸಗಿ ಅಕೌಂಟ್‌ಗಳಲ್ಲಿ ಚಾಟಿಂಗ್ ಮಾಡೋದು ಸಾಧ್ಯವಾಗುತ್ತಿರಲಿಲ್ಲ. ಖಾಸಗಿ ಹಾಗೂ ಆಫೀಸ್‌ ಅಕೌಂಟ್‌ಗಳನ್ನು ಬಳಸೋದು ಸವಾಲಾಗಿ ಪರಿಣಮಿಸಿತ್ತು. ಬಳಕೆದಾರರ ಅನುಕೂಲಕ್ಕಾಗಿ ಇದೀಗ ಒಂದೇ ಫೋನ್‌ನಲ್ಲಿ ಒಂದೇ ಬಾರಿಗೆ ಎರಡು ಅಕೌಂಟ್‌ಗಳನ್ನು ಬಳಸುವ ಸೇವೆ ನೀಡಲಾಗುತ್ತಿದೆ.

2ನೇ WhatsApp ಖಾತೆ ಬಳಸುವುದು ಹೇಗೆ..!??

ಒಂದೇ ಫೋನ್‌ನಲ್ಲಿ ನೀವು ಎರಡು ವಾಟ್ಸ್‌ಆ್ಯಪ್‌ ಖಾತೆಯನ್ನು ಹೊಂದಲು ನಿಮ್ಮ ಮೊಬೈಲ್‌ ಫೋನ್ ಎರಡು SIM ಕಾರ್ಡ್‌ಗಳನ್ನು ಬಳಸುವಂತಿರಬೇಕು. ಅದರಲ್ಲಿ ನಿಮ್ಮ WhatsApp ಸೆಟ್ಟಿಂಗ್‌ನಲ್ಲಿ ಖಾತೆಯನ್ನು ಸೇರಿಸಿ ಅನ್ನೋ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಆಗ ಅಪ್ಲಿಕೇಶನ್‌ನಲ್ಲಿ ಎರಡು ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಲು ಇದು ನಿಮ್ಮನ್ನು ಅನುಮತಿಸುತ್ತದೆ.

You cannot copy content from Baravanige News

Scroll to Top