ಉಡುಪಿ : ಭಾರತೀಯ ನೌಕಾದಳ ವತಿಯಿಂದ ನಡೆದ ಎನ್‌ಸಿಸಿ ನೇವಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ-ಗೋವಾ ಎನ್‌ಸಿಸಿ ಡೈರೆಕ್ಟರೇಟ್‌ನ ಕೆಡೆಟ್‌ಗಳು ಆರು ವರ್ಷದ ಅನಂತರ ಸಿಲ್ವರ್‌ಕಾಕ್ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಈ ಸ್ಪರ್ಧಾ ಶಿಬಿರವು ಮಹಾರಾಷ್ಟ್ರದ ಲೋನವಾಲ ಐಎನ್‌ಎಸ್ ಶಿವಾಜಿ ನೋವಲ್ ಬೇಸ್‌ನಲ್ಲಿ 30 ದಿನಗಳ ಕಾಲ ನಡೆದಿದ್ದು, ಉಡುಪಿ ಜಿಲ್ಲೆಯ 6 ವಿದ್ಯಾರ್ಥಿಗಳು ಕರ್ನಾಟಕ-ಗೋವಾ ಎನ್‌ಸಿಸಿ ಡೈರೆಕ್ಟರೇಟ್‌ನ್ನು ಪ್ರತಿನಿಧಿಸಿದ್ದರು.
ಉಡುಪಿ ಎಂಜಿಎಂ ಕಾಲೇಜಿನ ಪ್ರತೀಕ್ಷಾ ಕುಂದರ್, ಅಭಿಷೇಕ್ ಭಜಂತ್ರಿ, ರಜತ್ ಪಡಿಗಾರ್, ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಸುದೀಪಾ ಸುವರ್ಣ, ಸತ್ಯದೀಪ್ ರಾವ್, ಅಜಯ್ ಜೋಹನ್ ವಿಜೇತ ವಿದ್ಯಾರ್ಥಿಗಳು.
4 ಹಂತಗಳಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ತಂಡವು ಬೋಟ್ ಪುಲ್ಲಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡರು.