ಉಡುಪಿ ಅ.26, ಮಲ್ಪೆ ಠಾಣಾ ವ್ಯಾಪ್ತಿಯ ಕೆಮ್ಮಣ್ಣು ಹೂಡೆಯ ಬಳಿ, ರಾತ್ರಿ ಹೊತ್ತು ಅಪರಿಚಿತ ಮಹಿಳೆಯೊಬ್ಬಳು ಸಾರ್ವಜನಿಕರ ಮನೆಯನ್ನು ಅದು ನನ್ನ ಮನೆ ಇದು ನನ್ನ ಮನೆಯೆಂದು ತೋರಿಸುತ್ತಿದ್ದ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡು ತಿರುಗುತ್ತಿದ್ದವಳನ್ನು ವಿಶು ಶೆಟ್ಟಿಯವರು ರಕ್ಷಿಸಿ ಸಖಿ ಸೆಂಟರ್ ಗೆ ದಾಖಲಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸ್ಥಳೀಯರಾದ ಭಗವಾನ್, ಸದಾನಂದ ಕುಂದರ್ ಹಾಗೂ ವಿನಯ್ ಸಾಲಿಯಾನ್ ಸಹಕರಿಸಿದ್ದಾರೆ.
ಮಹಿಳೆಯ ಹೆಸರು ಮಂಜುಬಾಲ (55 ವರ್ಷ) ಹರಿಯಾಣ ಮೂಲದವರಾಗಿದ್ದು ಪತಿಯಿಂದ ನೊಂದು ಮನೆ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾರೆ. ಸಂಬಂಧಿಕರು ಇದ್ದಲ್ಲಿ ಸಖಿ ಸೆಂಟರ್ ಸಂಪರ್ಕಿಸಲು ಕೋರಲಾಗಿದೆ. ಕಾನೂನು ಪ್ರಕ್ರಿಯೆ ಮಲ್ಪೆ ಠಾಣೆಯಲ್ಲಿ ನಡೆಸಲಾಗಿದೆ.