ಶುಭಾ ಪೂಂಜಾ ನಟನೆಯ ಸಿನಿಮಾ ಸೆಟ್ನಲ್ಲಿ ಅಪರಿಚಿತ ಯುವಕರಿಂದ ಕಿರಿಕ್.. ಕೊರಗಜ್ಜನ ಸಿನಿಮಾ ಮಾಡದಂತೆ ವಿರೋಧ

ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ಕೊರಗಜ್ಜನ ಬಗ್ಗೆ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಬರುವ ಹಾಡಿನ ಚಿತ್ರೀಕರಣ ಮಾಡುತ್ತಿದ್ದ ವೇಳೆ ಯುವಕರ ಗುಂಪೊಂದು ಅಲ್ಲಿಗೆ ಬಂದು ವಿರೋಧ ವ್ಯಕ್ತ ಪಡಿಸಿದ ಘಟನೆ ನಡೆದಿದೆ.

ಕುದುರೆಮುಖದ ಮೈದಾಡಿ ಗುಡ್ಡದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅಪರಿಚಿತ ಯುವಕರು ಚಿತ್ರೀಕರಣ ಮಾಡುವ ಸ್ಥಳಕ್ಕೆ ಧಾವಿಸಿ ವಿರೋಧ ವ್ಯಕ್ತಪಡಿಸಿದ್ದಾರೆ.

ಸೆಟ್ನವರ ಜೊತೆ ಅಸಭ್ಯವಾಗಿ ವರ್ತಿಸಿ ಕಿರಿಕ್ ಮಾಡಿದ್ದಾರೆ.

You cannot copy content from Baravanige News

Scroll to Top