ಸಾಮಾನ್ಯವಾಗಿ ಜನಸಾಮಾನ್ಯರು ತುರ್ತು ಸಮಯದಲ್ಲಿ ರಾಜಕಾರಣಿಗಳ ಬಳಿ ಹೋಗಿ ಹಣಕಾಸಿನ ನೆರವು ಕೇಳುತ್ತಾರೆ. ಅದರಲ್ಲಿ ಹೆಚ್ಚಾಗಿ, ಮನೆ ನಿರ್ಮಾಣಕ್ಕೆ, ವೈದ್ಯಕೀಯ ಖರ್ಚು, ಸ್ಕೂಲ್ ಪೀಸು ಹೀಗೆ ಹಣದ ಸಹಾಯ ಮಾಡುವಂತೆ ಅಂಗಲಾಚುತ್ತಾರೆ. ಆದರೇ ಇಲ್ಲೊಬ್ಬ ವ್ಯಕ್ತಿ ಬಿಜೆಪಿ ನಾಯಕನ ಬಳಿ ಡೇಟಿಂಗ್ ಹೋಗಲು ಹಣದ ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾನೆ.
ಸದ್ಯ ವ್ಯಕ್ತಿ ಮಾಡಿರುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಗಾಲ್ಯಾಂಡ್ ಬಿಜೆಪಿ ನಾಯಕ ಇಮ್ನಾ ಅಲಾಂಗ್ ಅವರ ಬಳಿ ಅರಬಿಂದ ಪಾಂಡಾ ಎಂಬ ವ್ಯಕ್ತಿ ನನ್ನ ಕನಸಿನ ಹುಡುಗಿಯ ಜೊತೆಗೆ ಮೊದಲ ಡೇಟಿಂಗ್ ಹೋಗುತ್ತಿದ್ದೇನೆ. ಇದಕ್ಕೆ ಹಣದ ಸಹಾಯ ಮಾಡಿ ಎಂದು ಕೇಳಿದ್ದಾನೆ.
ಮೇಲ್ ಕಳುಹಿಸುವ ಮೂಲಕ ಅರಬಿಂದ ಪಾಂಡಾ ಸಹಾಯ ಕೇಳಿದ್ದಾನೆ. ಮೇಲ್ನಲ್ಲಿ ‘‘ಸರ್, ಅಕ್ಟೋಬರ್ 31ರಂದು ನಾನು ಮೊದಲ ಬಾರಿಗೆ ನನ್ನ ಕನಸಿನ ಹುಡುಗಿಯನ್ನು ಭೇಟಿಯಾಗಲಿದ್ದೇನೆ. ಆದರೆ ನನ್ನ ಕೈಯಲ್ಲಿ ಉದ್ಯೋಗವಿಲ್ಲ. ಆದ್ದರಿಂದ ದಯವಿಟ್ಟು ಸಹಾಯ ಮಾಡಿ. ಏನಾದರು ಮಾಡಿ ಸರ್’’ ಎಂದು ಕೇಳಿಕೊಂಡಿದ್ದಾನೆ.
ಇಮ್ನಾ ಅಲಾಂಗ್ ಎಕ್ಸ್ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ ‘‘ನಾನೇನು ಮಾಡಬೇಕು ಹೇಳಿ’’ ಎಂದು ಬರೆದುಕೊಂಡಿದ್ದಾರೆ.
ಸದ್ಯ ಈ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅನೇಕರು ಈ ಟ್ವೀಟ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.