ಸ್ಮಾರ್ಟ್ಫೋನ್ ಬಳಕೆ ಹೆಚ್ಚಾಗದಂತೆ ಮೋಸದ ಜಾಲಗಳು ಹೆಚ್ಚಾಗುತ್ತಿವೆ. ಬರೀ ಒಂದು ಮಿಸ್ ಕಾಲ್ ಸಾಕು ನಿರ್ಮಿಷಾರ್ಧದಲ್ಲೇ ಅಕೌಂಟ್ನಲ್ಲಿದ್ದ ಹಣ ಮಂಗಮಾಯವಾಗುವ ಘಟನೆಗಳು ಮುನ್ನೆಲೆ ಬರುತ್ತಿರುತ್ತವೆ. ಆದರಂತೆಯೇ ದೆಹಲಿಯೊಬ್ಬರು ಮಹಿಳೆ ಬರೀ ಮೂರು ಮಿಸ್ಡ್ ಕರೆಗಳನ್ನು ಸ್ವೀಕರಿಸಿದ ಪರಿಣಾಮ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ಹಣ ಕಳೆದುಕೊಂಡ ಪ್ರಸಂಗ ಬೆಳಕಿಗೆ ಬಂದಿದೆ.
35 ವರ್ಷದ ವಕೀಲೆಯೊಬ್ಬರು ತಮ್ಮ ಫೋನ್ಗೆ ಬಂದ ಮಿಸ್ಟ್ ಕರೆಯನ್ನು ಸ್ವೀಕರಿಸಿ ‘ಸಿಮ್ ಸ್ವಾಪ್’ ಹಗರಕ್ಕೆ ಸಿಲುಕಿಕೊಂಡಿದ್ದಾರೆ. ಫೋನ್ಗೆ ಬಂದ ಮೂರು ಮಿಸ್ಡ್ ಕರೆಗಳ ಮೂಲಕ ಬ್ಯಾಂಕ್ ಖಾತೆಯಲ್ಲಿದ್ದ ಹಣ ಕಳೆದುಕೊಂಡಿದ್ದಾರೆ.
ಎಚ್ಚರ! ಸಿಮ್ ಸ್ವಾಪ್ ಮಾಡ್ತಾರೆ ಹುಷಾರ್
ಮಹಿಳೆಯ ಮೊಬೈಲ್ಗೆ ಮೂರು ಬಾರಿ ಮಿಸ್ಡ್ ಕರೆ ಬರುತ್ತದೆ. ಮೂರು ಬಾರಿಯು ಬಂದ ಮಿಸ್ಟ್ ಕರೆಯನ್ನ ಗಮನಿಸಿ ಮಹಿಳೆ ನಂಬರ್ಗೆ ಕರೆ ಮಾಡುತ್ತಾಳೆ. ಕೊಂಚ ಹೊತ್ತಿನ ಬಳಿಕ ಯಾವುದೇ ಒಟಿಪಿ, ಪರ್ಸನಲ್ ವಿವರಗಳನ್ನು ಪಡೆಯದೆ ಬ್ಯಾಂಕ್ ಖಾತೆಯಿಂದ ನಿಮ್ಮ ಹಣ ಡೆಬಿಟ್ ಆಗಿದೆ ಎಂಬ ಸಂದೇಶ ಬರುತ್ತದೆ.
ಮಾಹಿತಿ ಪ್ರಕಾರ ವಕೀಲೆ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾಳೆ. ಒಟ್ಟು ಆಕೆಗೆ ಮೂರು ಮಿಸ್ಟ್ ಕರೆಗಳು ಬಂದಿದ್ದು, ಇನ್ನೊಂದು ಸಂಖ್ಯೆಯ ಮೂಲಕ ಆ ನಂಬರ್ಗೆ ಕರೆ ಮಾಡಲು ಪ್ರಯತ್ನಿಸಿದರೆ ಅತ್ತ ಕಡೆಯಿಂದ ಕೊರಿಯರ್ ಡೆಲಿವರಿ ಎಂದು ಹೇಳಿದ್ದಾರೆ.
ಅಂದಹಾಗೆಯೇ ಇದು ನಕಲಿ ಸಿಮ್ ಬಳಸಿ ಮಾಡಿದ ಕಳ್ಳಾಟವಾಗಿದೆ. ಇದರಿಂದಾಗಿ ದೆಹಲಿ ಮೂಲದ ಮಹಿಳೆ ವಂಚನೆಗೆ ಸಿಲುಕಿದ್ದು, ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಇನ್ನು ವಕೀಲೆ ಫೋನ್ನಲ್ಲಿ ಮಾಡಿರುವ ಬ್ರೌಸಿಂಗ್, ಫಿಶಿಂಗ್ ಲಿಂಕ್, ಯುಪಿಐ ಮೆಸೇಜ್ಗಳನ್ನು ಪರಿಶೀಲಿಸಿದ್ದಾರೆ. ಆದರೆ ಸಿಮ್ ಸ್ವಾಪ್ ಮಾಡಿದ ವಂಚಕರು ಮಹಿಳೆಯ ವೈಯಕ್ತಿಕ ಡೇಟಾ ಮೂಲಕ ಆಕೆಯ ಖಾತೆಗೆ ಕನ್ನ ಹಾಕಿದ್ದಾರೆ.
ಇಂಥಾ ವಂಚನೆಯಿಂದ ಪಾರಾಗೋದು ಹೇಗೆ?
ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ವೈಯಕ್ತಿಕ ವಿಳಾಸವನ್ನು ಬಳಸುವ ಮುನ್ನ ಎಚ್ಚರದಿಂದ ಇರುವುದು ಒಳಿತು. ಅದರಲ್ಲೂ ಆಧಾರ್, ಪಾನ್ ಸೇರಿದಂತೆ ವೈಯಕ್ತಿಕ ಡೇಟಾ ಪೋಸ್ಟ್ ಮಾಡಿದರೆ ಇಂತಹ ಬಲೆಗೆ ಬೀಳೋದು ಪಕ್ಕಾ.
ಇನ್ನು ವೈಯಕ್ತಿಕ ಸಿಮ್ ಕಾರ್ಡ್ ಉಪಯೋಗಿಸದೇ ಇದ್ದರೆ ಟೆಲಿಕಾಂ ಕಂಪನಿಗೆ ಕರೆ ಮಾಡಿ ಬ್ಲಾಕ್ ಮಾಡಿಸಬೇಕು. ಬ್ಯಾಂಕ್ ಸೇರಿದಂತೆ ಇತರೆ ಒಟಿಪಿ ಆ ನಂಬರ್ಗೆ ಬಾರದಂತೆ ಜಾಗೃತೆ ವಹಿಸಬೇಕು. ಹೀಗಿದ್ದಾಗ ಸಿಮ್ ಸ್ವಾಪ್ ಹಗರಣದಿಂದ ಬಚಾವ್ ಆಗಬಹುದು.