ಉಡುಪಿ: ಹಿರಿಯ ಪತ್ರಕರ್ತ, ಸಾಹಿತಿ ಶೇಖರ್ ಅಜೆಕಾರ್ ನಿಧನ

ಉಡುಪಿ, ಅ 31: ಹಿರಿಯ ಪತ್ರಕರ್ತ,ಸಾಹಿತಿ ,ಸಂಘಟಕ ಶೇಖರ್ ಅಜೆಕಾರ್ (54) ಅವರು ಮಂಗಳವಾರ ಅಕ್ಟೋಬರ್ 31 ರಂದು ಹೃದಯಾಘಾತದಿಂದ ನಿಧನರಾದರು. ಅವರು ದಾಯ್ಜಿವಲ್ಡ್ ನಲ್ಲಿ ಬಹಳಷ್ಟು ವರ್ಷಗಳ ಕಾಲ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು.

ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮೂಲಕ ನಾಡಿನ ಗಮನ ಸೆಳೆದ ಅಜೆಕಾರು ಕವಿಗಳಾಗಿಯೂ ಗುರುತಿಸಿಕೊಂಡಿದ್ದಾರೆ. ಕರಾವಳಿಯ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಜವಬ್ದಾರಿಯುತ ಹುದ್ದೆಗಳನ್ನು ನಿಭಾಯಿಸಿದ್ದ ಇವರು, ಲೇಖಕರಾಗಿ ಹೊಸ ಹಾದಿಯ ಅನ್ವೇಷಕರಾಗಿ, ಸಂಶೋಧಕರಾಗಿ, ಛಾಯಾಗ್ರಾಹಕರಾಗಿ, ಸಂಘಟಕರಾಗಿ, ಶಿಕ್ಷಣ ತಜ್ಞರಾಗಿ, ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ.

ಅವರ ಜೀವನ ಚರಿತ್ರೆ “ಅಜೆಕಾರಿನ ಅಜೆಕಾರು ” ಸಹಿತ 27 ಪುಸ್ತಕಗಳನ್ನು ಪ್ರಕಟಿಸಿರುವ ಅವರಿಗೆ ತುಳುವ ಮಾಧ್ಯಮ ರತ್ನ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನ ಮಾಧ್ಯಮ ಸೇವಾ ರತ್ನ, ಕೃಷಿಕ ಬಂಧು ಸೇರಿದಂತೆ ೧೦೦ ಕ್ಕೂ ಹೆಚ್ಚು ರಾಜ್ಯ- ರಾಷ್ಟ್ರಮಟ್ಟದ ಗೌರವಗಳಿಗೆ ಪಾತ್ರರಾಗಿದ್ದಾರೆ.

ಕನ್ನಡ- ತುಳು ಭಾಷೆಯ ಸಾಹಿತಿಯಾಗಿ, ನಾಡು ನುಡಿಯ ಸೇವಕರಾಗಿ ಖ್ಯಾತರಾಗಿದ್ದ ಇವರು ತುಳುನಾಡಿನ ವಿಶೇಷ ಕಂಬಳ ಕ್ರೀಡೆಯ ಕುರಿತ 5 ಕೃತಿಗಳನ್ನು ಪ್ರಕಟಿಸಿದ್ದಾರೆ. 3 ವ್ಯಕ್ತಿ ಚಿತ್ರಗಳು ಹತ್ತಾರು ಊರುಗಳ ಕುರಿತ ಅವರ ಕೃತಿಗಳು ಪ್ರಕಟಗೊಂಡಿವೆ.

ಮೃತರು ಪತ್ನಿ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Scroll to Top