2023 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕುತ್ಯಾರು ಯುವಕ‌ ಮಂಡಲ ಆಯ್ಕೆ; ನಾಳೆ ಪ್ರಶಸ್ತಿ ಪ್ರಧಾನ

ಕುತ್ಯಾರು, ಅ.31: ಸಾಧನೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರ ಕೊಡಮಾಡುವ 2023 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕುತ್ಯಾರು ಯುವಕ‌ ಮಂಡಲ ಆಯ್ಕೆಯಾಗಿದೆ.

ನಾಳೆ ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾಡಾಳಿತದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.

ಸದ್ರಿ ಸಂಸ್ಥೆಯು 1963ರಲ್ಲಿ ಸ್ಥಾಪನೆಯಾಗಿದ್ದು, 60 ವರ್ಷಗಳಿಂದ ಕುತ್ಯಾರು ಯುವಕ ಮಂಡಲವು ಶೈಕ್ಷಣಿಕ ಕ್ಷೇತ್ರ, ಕ್ರೀಡಾ ಕ್ಷೇತ್ರ, ಕೃಷಿ ಕ್ಷೇತ್ರ, ಕಲಾಕ್ಷೇತ್ರ, ಉದ್ಯೋಗ ಕಾರ್ಯಕ್ರಮ, ರಾಷ್ಟೀಯ ಹಬ್ಬ, ಪರಿಸರ ಸಂರಕ್ಷಣೆ, ರಕ್ತದಾನ ಇತ್ಯಾದಿ ಸಮಾಜ ಸೇವೆಗಳನ್ನು ಮಾಡಿಕೊಂಡು ಬಂದಿರುತ್ತದೆ.

You cannot copy content from Baravanige News

Scroll to Top