ಫೇಸ್ ಬುಕ್ ನಲ್ಲಿ ಫೋಟೋ ಶೇರ್ ಮಾಡೋ ಮುನ್ನ ಎಚ್ಚರ; ರಾಕ್ಲೈನ್ ವೆಂಕಟೇಶ್ ತಮ್ಮನ ಮನೆಗೆ ಕನ್ನ ಹಾಕಿದ ಖದೀಮರು

ಸೋಶಿಯಲ್​ ಮೀಡಿಯಾ ಇತ್ತೀಚೆಗೆ ಹೇಗೆ​ ಆಗಿದೆ ಅಂದ್ರೆ ಊಟ ಮಾಡಿದ್ದು, ತಿಂಡಿ ತಿಂದಿದ್ದು, ಸೇರಿ ಮನೆಗೆ ತರೋ ವಸ್ತುಗಳನ್ನೂ ಪೋಸ್ಟ್​ ಮಾಡೋ ಪ್ಲಾಟ್​ಫಾರ್ಮ್​ ಆಗಿದೆ. ಹೀಗೆ ತಮ್ಮ ಪರ್ಸನಲ್​ ಅಪ್​ಡೇಟ್​​ ಅನ್ನ ಸೋಶಿಯಲ್​ ಮಿಡಿಯಾದಲ್ಲಿ ಪೋಸ್ಟ್​ ಮಾಡಿದ ಮನೆಯನ್ನೇ ಕಳ್ಳರು ದೋಚಿದ್ದಾರೆ. ಅದು ಬೇರೆ ಯಾರ್​ ಮನೆಯೂ ಅಲ್ಲ ರಾಕ್​ಲೈನ್ ವೆಂಕಟೇಶ್ ಸಹೋದರನ ಮನೆ.

ಫೇಸ್​ಬುಕ್​, ವಾಟ್ಸ್​​ಆ್ಯಪ್​, ಇನ್​ಸ್ಟಾಗ್ರಾಮ್​ ಈಗ ನಮ್ಮ ಭಾವನೆಗಳನ್ನ ಶೇರ್​ ಮಾಡಿಕೊಳ್ಳುವ ಒಂದು ಪ್ಲಾಟ್​ಫಾರ್ಮ್​ ಆಗಿದೆ. ಅಲ್ಲಿ ಸಿಗೋ ಕಮೆಂಟ್​​, ಲೈಕ್​ ಅನ್ನು ರಿಯಲ್​ ಖುಷಿ ಅನ್ಕೊಂಬಿಟ್ಟಿದ್ದಾರೆ.

ಖತರ್ನಾಕ್​ ಕಳ್ಳರು ಇದನ್ನೇ ಬಂಡವಾಳ ಮಾಡ್ಕೊಂಡಿದ್ದಾರೆ. ಅದಕ್ಕೆ ಈ ಘಟನೆಯೇ ಬೆಸ್ಟ್​​ ಎಕ್ಸಾಂಪಲ್​.

ಯುರೋಪ್ ಟ್ರಿಪ್ ಹೋಗಿದ್ದ ರಾಕ್ ಲೈನ್ ವೆಂಕಟೇಶ್ ತಮ್ಮನ ಮನೆಯಲ್ಲಿ ಕಳ್ಳತನ ನಡೆದಿದೆ. ಅಷ್ಟಕ್ಕೂ ಯೂರೋಪ್ ಟ್ರಿಪ್ ಹೋಗಿರೋ ಬಗ್ಗೆ ಮಾಹಿತಿ ಹೇಗ್ ಲೀಕ್ ಆಯ್ತು ಗೊತ್ತಾ? ಫೆಸ್​ಬುಕ್​ನಲ್ಲಿ ಹಾಕಿದ್ದ ಅದೊಂದು ಪೋಸ್ಟ್​.

ಹೌದು, ರಾಕ್ ಲೈನ್ ವೆಂಕಟೇಶ್ ತಮ್ಮ ಭ್ರಮರೇಶ್ ಕುಟುಂಬಸ್ಥರು ಯುರೋಪ್​ಗೆ ಹೋಗಿದ್ದ ಪೋಸ್ಟ್​ ಅನ್ನ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ರು. ಇದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ರಾಕ್​ಲೈನ್ ವೆಂಕಟೇಶ್ ಸಹೋದರನ ಮನೆಯಲ್ಲಿದ್ದ 5 ಕೆ.ಜಿ. ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿರುವ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರ ಮನೆಯ ಪಕ್ಕದಲ್ಲಿ ನಿರ್ಮಾಣ ಹಂತದ ಕಟ್ಟಡವಿತ್ತು. ಈ ಕಟ್ಟಡದಿಂದ ಭ್ರಮರೇಶ್​ ಮನೆಗೆ ಜಂಪ್ ಮಾಡಿ ಕಳ್ಳತನ…ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸದ್ಯ, ಸಿಸಿಟಿವಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬಿಸಿದ್ದಾರೆ. ಈ ಘಟನೆ ಒಂದು ಪಾಠ ಇನ್ನಾದರೂ ನಿಮ್ಮ ಪರ್ಸನಲ್​ ಅಪ್​ಡೇಟ್ಸ್​ನ ಸೋಶಿಯಲ್​ ಮಿಡಿಯಾದಲ್ಲಿ ಶೇರ್​ ಮಾಡುವ ಮುನ್ನ ಒಮ್ಮೆ ಯೋಚಿಸಿ.

You cannot copy content from Baravanige News

Scroll to Top