ತಿರುವನಂತಪುರಂ : ಮಲಯಾಳ ಭಾಷೆಯ ಜನಪ್ರಿಯ ಕಿರುತೆರೆ ಧಾರಾವಾಹಿಯ ನಟಿ ಡಾ.ಪ್ರಿಯಾ (35) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ಅವರು ಡಾ. ಪ್ರಿಯಾ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದು, ವೈವಾಹಿಕ ಜೀವನಕ್ಕೆ ಕಾಲಿರಿಸಿದ ಬಳಿಕ ನಟನೆಯಿಂದ ದೂರವಿದ್ದರು. ಆಕೆ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ನಿನ್ನೆ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋಗಿದ್ದ ವೇಳೆಯೇ ಆಕೆಗೆ ಹೃದಯ ಸ್ತಂಭನವಾಗಿದೆ. ಆಕೆಯ ಶಿಶು ಈಗ ಐಸಿಯುನಲ್ಲಿದೆ. ಆಕೆಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ ಎನ್ನಲಾಗಿದೆ.
ಆಕೆ ಎಂಡಿ ವ್ಯಾಸಂಗ ಮಾಡುತ್ತಿದ್ದು, ತಿರುವನಂತಪುರಂನ ಪಿಆರ್ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.