ನಿಮಗೆ ಆನ್ಲೈನ್ ಶಾಪಿಂಗ್ ಮಾಡೋ ಚಟ ಇದೆಯೇ? ನೀವು ಓದಲೇಬೇಕಾದ ಸ್ಟೋರಿ ಇದು!

ಪೊಲೀಸರು ಚಾಪೆ ಕೆಳಗೆ ನುಗ್ಗಿದ್ರೆ, ಸೈಬರ್ ಖದೀಮರು ರಂಗೋಲಿ ಕೆಳಗೆ ನುಸುಳಿ ಬಿಡ್ತಾರೆ. ವಂಚಿಸೋದಕ್ಕೆ ದಿನಕ್ಕೊಂದು ಹೊಸ ಮಾರ್ಗ ಹುಡುಕ್ತಿರುವ ವಂಚಕರು, ಕೇವಲ 2 ರೂಪಾಯಿ ಮೂಲಕ ಜನರಿಗೆ ಪಂಗನಾಮ ಹಾಕಿದ್ದಾರೆ.

ಇತ್ತೀಚೆಗೆ ಜನರಿಗೆ ಶಾಪಿಂಗ್ ಫ್ರೀಕ್ ಸ್ವಲ್ಪ ಜಾಸ್ತಿ ಆಗ್ತಿದೆ. ಅಂಗಡಿಗೆ ಹೋದ್ರೆ ಗಂಟೆ ಗಟ್ಟಲೇ ಟೈಮ್ ವೇಸ್ಟ್ ಆಗುತ್ತೆ ಅಂತ ಆನ್ಲೈನ್ನಲ್ಲೇ ಆರ್ಡರ್ ಮಾಡ್ತಾರೆ. ಕಸ ಗುಡಿಸೋ ಪೊರಕೆಯಿಂದ ಹಿಡಿದು, ವಾಷಿಂಗ್ ಮಷೀನ್ವರೆಗೂ ಆನ್ಲೈನ್ನಲ್ಲೇ ಆರ್ಡರ್ ಮಾಡ್ತಾರೆ. ಈ ರೀತಿ ಆನ್ಲೈನ್ ಸೇವೆಗಳಿಗೆ ಅಡಿಕ್ಟ್ ಆಗಿರೋರೇ ಇದೀಗ ಸೈಬರ್ ಖದೀಮರ ಟಾರ್ಗೆಟ್ ಆಗ್ತಿದ್ದಾರೆ.

ಅಪರಿಚಿತರು ಕಳಿಸೋ ಕೊರಿಯರ್ ಅನ್ನ ನಂಬಿ ತಗೋಳೊಕೆ ಹೋಗಿ ಜನ ಮೋಸ ಹೋಗ್ತಿದ್ದಾರೆ. ದಿನೇ ದಿನೇ ನಗರದಲ್ಲಿ ಕೊರಿಯರ್ ವಂಚನೆ ಪ್ರಕರಣಗಳು ಜಾಸ್ತಿಯಾಗ್ತಿದ್ದು, ಒಂದೇ ತಿಂಗಳಲ್ಲಿ 750 ಕೊರಿಯರ್ ಫ್ರಾಡ್ ಕೇಸ್ಗಳು ದಾಖಲಾಗಿದೆ.

ವಂಚನೆ ಹೇಗೆ..!??

ಮೊದಲಿಗೆ ನಿಮ್ಮ ಮೊಬೈಲ್ಗೆ ಒಂದು ಫೋನ್ ಕರೆ ಬರುತ್ತೆ, ಕರೆಯಲ್ಲಿ ನಾವು ಕೊರಿಯರ್ ಆಫೀಸ್ನಿಂದ ಅಂತಾರೆ. ನಿಮ್ಮ ಹೆಸರಿಗೆ ಕೊರಿಯರ್ ಬಂದಿದೆ, ಅಡ್ರೆಸ್ ಹೇಳಿ ಅಂತಾರೆ, ನಿಮಗೊಂದು ಲಿಂಕ್ ಕಳಿಸ್ತೀವಿ, ಅದಕ್ಕೆ 2 ರೂ. ಹಾಕಿ ಅಂತಾರೆ. ಕೇವಲ 2 ರೂಪಾಯಿ ಅಷ್ಟೇ ಅಲ್ವಾ ಅಂತ ಲಿಂಕ್ ಓಪನ್ ಮಾಡಿದ್ರೆ ಮುಗೀತು. ನೀವು 2 ರೂಪಾಯಿ ಕಳಿಸಿದ್ರೂ ನಿಮ್ಮ ಅಕೌಂಟ್ ಖಾಲಿ ಆಗುತ್ತೆ. ಆ ಲಿಂಕ್ ಬಳಸಿ ನಿಮ್ಮ ಖಾತೆಯಲ್ಲಿರೋ ಹಣವೆಲ್ಲಾ ಎಗರಿಸ್ತಾರೆ.

ಒಟ್ನಲ್ಲಿ ಮೋಸ ಹೋಗುವವರು ಎಲ್ಲಿವರೆಗೂ ಇರ್ತಾರೋ ಮೋಸ ಮಾಡುವವರು ಅಲ್ಲಿವರೆಗೂ ಇರ್ತಾರೆ.. ಈ ರೀತಿಯ ಮೋಸ ಜಾಲದಿಂದ ಅದಷ್ಟೂ ಸೇಫ್ ಆಗಿರಿ..!

You cannot copy content from Baravanige News

Scroll to Top