ಲವರ್ ಔಟಿಂಗ್ ಬಂದಿಲ್ಲವೆಂದು ಪಿಜಿಗೆ ಕಲ್ಲೆಸೆದ ಯುವಕ: ಸಾರ್ವಜನಿಕರಿಂದ ಧರ್ಮದೇಟು

ಮಂಗಳೂರು, ನ.02: ತನ್ನ ಲವರ್ ಔಟಿಂಗ್ ಬರಲಿಲ್ಲ ಅಂತಾ ಆಕೆ ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಯುವಕನೊಬ್ಬ ಕಲ್ಲು ತೂರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗದಲ್ಲಿ ನಡೆದಿದೆ.

ಕಲ್ಲೆಸೆತದಿಂದ ಕಟ್ಟಡದ ಗಾಜು ಪುಡಿಯಾಗಿದ್ದರಿಂದ ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆನ್ನಲಾಗಿದೆ.

ಸುಳ್ಯ ನಿವಾಸಿ ವಿವೇಕ್ (18) ಸುರೇಶ್ ಶೆಟ್ಟಿ ಎಂಬವರ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದು, ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಅದರಂತೆ ನಿನ್ನೆ (ನವೆಂಬರ್ 3) ಸಂಜೆ ಔಟಿಂಗ್ಗೆ ಬರುವಂತೆ ಕರೆ ಮಾಡಿದ್ದಾನೆ.

ಆದರೇ ಯುವತಿ ಔಟಿಂಗ್ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ.

ಘಟನೆಯಲ್ಲಿ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್ನನ್ನು ಹಿಡಿದು ಥಳಿಸಿದ್ದಾರೆ ಎಂದು ವರದಿಯಾಗಿದೆ.

You cannot copy content from Baravanige News

Scroll to Top