ಬರ ನಿರ್ವಹಣೆಗೆ ಅನುದಾನ : ದ.ಕ. ಜಿಲ್ಲೆಗೆ 3 ಕೋ. ರೂ. ಉಡುಪಿಗೆ 4.50 ಕೋ. ರೂ. ಮಂಜೂರು

ಉಡುಪಿ : ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆಯ ಕೊರತೆ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಲಕಂಟಕ ಎದುರಾಗಿದ್ದು ಬರಗಾಲ ಛಾಯೆ ಮೂಡಿದೆ. ಹೀಗಾಗಿ ಸರ್ಕಾರವು ರಾಜ್ಯದ 195 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಈಗಾಗಲೇ ಘೋಷಣೆ ಮಾಡಿದೆ.


ಇದಕ್ಕಾಗಿ ಬರ ಪೀಡಿತ ತಾಲೂಕುಗಳ ನಿರ್ವಹಣೆಗಾಗಿ ಸರ್ಕಾರ ರಾಜ್ಯದ ಎಲ್ಲಾ ತಾಲೂಕುಗಳಿಗೆ ಅನುದಾನವನ್ನು ಬಿಡುಗಡೆಗೊಳಿಸಿ ಆದೇಶ ಮಾಡಿದೆ. ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೂ 3 ಕೋ.ರೂ. ಮೀಸಲಿಡಲಾಗಿದೆ. ಉಡುಪಿ ಜಿಲ್ಲಾ ಬರ ನಿರ್ವಹಣೆಗೆ 4.50ಕೋ.ರೂ ಬಿಡುಗಡೆ ಮಾಡಿದೆ.

ಬರ ತಾಲೂಕುಗಳಲ್ಲಿ ಕುಡಿಯುವ ನೀರು ಸಹಿತ ವಿವಿಧ ತುರ್ತು ಕಾಮಗಾರಿಗಳಿಗೆ ಈ ಅನುದಾನ ಬಳಕೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಪ್ರತಿಕ್ರಿಯಿಸಿದ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಡುಪಿ ಜಿಲ್ಲೆಯ ಬರ ನಿರ್ವಹಣೆ ಸಂಬಂಧ ಸರಕಾರದಿಂದ ಅನುದಾನ ಮಂಜೂರಾತಿಗೆ ಆದೇಶ ಆಗಿದ್ದು, ಇದರ ಪ್ರತಿ ಇನ್ನಷ್ಟೇ ಲಭ್ಯವಾಗವೇಕಿದೆ. ಅನುದಾನವನ್ನು ನಿರ್ದಿಷ್ಟ ಮಾನದಂಡದಂತೆ ವಿನಿಯೋಗ ಮಾಡಲಾಗುತ್ತದೆ. ಉಡುಪಿಯಲ್ಲಿ ತುರ್ತು ನಿರ್ವಹಣೆಗೆ ಸುಮಾರು 12 ಕೋ. ರೂ ಸದ್ಯ ಲಭ್ಯವಿದೆ ಎಂದು ಹೇಳಿದ್ದಾರೆ.

You cannot copy content from Baravanige News

Scroll to Top